ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗರ್ ಚಂದನ್ ಶೆಟ್ಟಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲೂಎನ್ಸರ್ ನಿವೇದಿತಾ ಗೌಡ ವಿಚ್ಛೇದನ ಆಗಿ ವರ್ಷಗಳೇ ಉರುಳಿವೆ. ಇದೀಗ ಚಂದನ್ ಶೆಟ್ಟಿ ನಿವೇದಿತಾರನ್ನು ಮಿಸ್ ಮಾಡ್ಕೋತೇನೆ ಎಂದು ಹೇಳಿದ್ದಾರೆ.
ನಮ್ಮ ಲೈಫ್‌ಸ್ಟೈಲ್ ಬದಲಾವಣೆಗಳ ಕಾರಣ ಡಿವೋರ್ಸ್ ಆಯ್ತು ಬಿಟ್ರೆ ಯಾರಿಗೆ ಯಾರೂ ಮೋಸ ಮಾಡಿಲ್ಲ. ಅವಳು ಕೆಫೆ ಹುಡುಗಿ, ನಾನು ರೋಡ್‌ಸೈಡ್‌ಲ್ಲಿ ಬೇಕಾದ್ರೂ ತಿಂದು ಜೀವನ ಮಾಡ್ತೇನೆ. ಹೊಂದಾಣಿಕೆ ಸಂಸಾರಕ್ಕೆ ಬೇಕು. ಅದೇ ಇಲ್ಲದ ಮೇಲೆ ಇರೋಕೆ ಆಗಲಿಲ್ಲ. ಹೀಗಾಗಿ ಡಿವೋರ್ಸ್ ಮಾಡಿದ್ದು ಎಂದು ಹೇಳಿಕೊಂಡಿದ್ದಾರೆ.
ಟ್ರಿಪ್ ಹೋಗಿದ್ದೀವಿ, ಖುಷಿ ಕ್ಷಣಗಳನ್ನು ಕಳೆದಿದ್ದೀವಿ ಅದೆಲ್ಲ ನೆನೆಸಿಕೊಂಡ್ರೆ ಬೇಜಾರಾಗತ್ತೆ. ಅವರನ್ನು ಮಿಸ್ ಮಾಡ್ಕೋತಾ ಇದಿನಿ. ಬಟ್ ನನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಇಲ್ಲ ಎಂದಿದ್ದಾರೆ.