March 31, 2026
Tuesday, March 31, 2026
spot_img

‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್’: ಈ ಬಾರಿ ಯಾವ ಪ್ರಶಸ್ತಿ ಯಾರ ಕೈ ಸೇರಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಪ್ರತಿಭಾವಂತರನ್ನು ಗೌರವಿಸುವ 7ನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ಸಮಾರಂಭ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. 2025ರಲ್ಲಿ ಬಿಡುಗಡೆಯಾದ ಸಿನಿಮಾಗಳ ಕಲಾವಿದರು ಹಾಗೂ ತಂತ್ರಜ್ಞರಿಗೆ ಈ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಬಾರಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭರ್ಜರಿ ಮೆಲುಕು ಹಾಕಿ ಒಟ್ಟು 9 ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಸಮಾರಂಭದ ಕೇಂದ್ರಬಿಂದುವಾಯಿತು.

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಇದೇ ಚಿತ್ರದ ನಿರ್ದೇಶನಕ್ಕೂ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂದಿದ್ದು, ಒಟ್ಟಾರೆ ಮೂರು ಟ್ರೋಫಿಗಳು ಅವರ ಪಾಲಾದವು. ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಇದೇ ಸಿನಿಮಾಗೆ ಲಭಿಸಿದೆ.

ಇದನ್ನೂ ಓದಿ:

ಇನ್ನೊಂದೆಡೆ, ‘ಗತ ವೈಭವ’ ಚಿತ್ರದ ಅಭಿನಯಕ್ಕಾಗಿ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು.

ಇನ್ನುಳಿದಂತೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025 ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:

ಅತ್ಯುತ್ತಮ ಚೊಚ್ಚಲು ನಿರ್ಮಾಣ – ನಿವೇದಿತಾ ಶಿವರಾಜ್ ಕುಮಾರ್ (ಫೈರ್ ಪ್ಲೈ)
ಅತ್ಯುತ್ತಮ ಚೊಚ್ಚಲ ಬರಹಗಾರ – ಸುಮಂತ್ ಭಟ್ (ಮಿಥ್ಯ)
ಅತ್ಯುತ್ತಮ ಚೊಚ್ಚಲ ಸಿನಿಮಾ ನಿರ್ದೇಶನ – ಭೀಮರಾವ್ ಪಿ (ಹೆಬ್ಬುಲಿ ಕಟ್)
ಅತ್ಯುತ್ತಮ ಚೊಚ್ಚಲ ನಟಿ – ಪ್ರಿಯಾಂಕಾ ಆಚಾರ್ (ಏಳುಮಲೆ)
ಅತ್ಯುತ್ತಮ ಚೊಚ್ಚಲ ನಟ – ಕಿರಿಟಿ (ಜ್ಯೂನಿಯರ್) ಹಾಗೂ ದುಷ್ಯಂತ್ (ಗತ ವೈಭವ)
ಅತ್ಯುತ್ತಮ ಬಾಲ ನಟ – ಅತೀಶ್ ಶೆಟ್ಟಿ (ಮಿಥ್ಯ)
ಅತ್ಯುತ್ತಮ ವಿಎಫ್‌ಎಕ್ಸ್ – ಕೆ.ವಿ. ಸಂಜಿತ್ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ಕಲಾ ನಿರ್ದೇಶನ – ಬೆಂಗಲನ್ ಮತ್ತು ಧರಣಿ ಗಂಗಾಪುತ್ರ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ಸಾಹಸ ನಿರ್ದೇಶನ – ಅರ್ಜುನ್ ರಾಜ್ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ಸಂಕಲನ – ಕೆ.ಎಂ. ಪ್ರಕಾಶ್ (ಏಳುಮಲೆ)
ಅತ್ಯುತ್ತಮ ಸಂಭಾಷಣೆ – ಜೆ.ಪಿ. ತುಮಿನಾಡು (ಸು ಫ್ರಂ ಸೋ)
ಅತ್ಯುತ್ತಮ ಸಿನಿಮಾಟೋಗ್ರಫಿ – ಅರವಿಂದ್ ಕಶ್ಯಪ್ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ನೃತ್ಯ ನಿರ್ದೇಶನ – ವಿನಾಯಕ ಆಚಾರ್ಯ (ಸು ಫ್ರಂ ಸೋ)
ಅತ್ಯುತ್ತಮ ಗಾಯಕ – ಅಬ್ಬಿ ವಿ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ಗಾಯಕಿ – ಸಾನ್ವಿ ಸುದೀಪ್ (ಮಾರ್ಕ್)
ಅತ್ಯುತ್ತಮ ಚಿತ್ರ ಸಾಹಿತ್ಯ – ಸಿಂಪಲ್ ಸುನಿ (ಗತ ವೈಭವ)
ಅತ್ಯುತ್ತಮ ಹಿನ್ನೆಲೆ ಸಂಗೀತ – ಸಂದೀಪ್ ತುಳಸಿದಾಸ್ (ಸು ಫ್ರಂ ಸೋ)
ಅತ್ಯುತ್ತಮ ಸಂಗೀತ – ಅಜನೀಶ್ ಲೋಕನಾಥ್ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ಚಿತ್ರಕಥೆ – ಪುನೀತ್ ರಂಗಸ್ವಾಮಿ (ಏಳುಮಲೆ)
ಅತ್ಯುತ್ತಮ ಸಹ ನಟಿ – ಸಂಧ್ಯಾ ಅರಕೆರೆ (ಸು ಫ್ರಂ ಸೋ)
ಅತ್ಯುತ್ತಮ ಸಹ ನಟ – ಮಹಾಂತೇಶ್ ಹಿರೇಮಠ (ಹೆಬ್ಬುಲಿ ಕಟ್)
ಅತ್ಯುತ್ತಮ ನಿರ್ದೇಶಕ – ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ನಟಿ – ಆಶಿಕಾ ರಂಗನಾಥ್ (ಗತ ವೈಭವ)
ಅತ್ಯುತ್ತಮ ನಟ – ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)
ಅತ್ಯುತ್ತಮ ಚಿತ್ರ – ಕಾಂತಾರ: ಚಾಪ್ಟರ್ 1
ಜೀವಮಾನ ಸಾಧನೆ ಪ್ರಶಸ್ತಿ – ಎಸ್.ವಿ.ರಾಜೇಂದ್ರ ಸಿಂಗ್ ಬಾಬು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !