ಐಟಿ ಕಂಪನಿಗಳನ್ನು ಆಕರ್ಷಿಸಲು ಚಂದ್ರಬಾಬು ನಾಯ್ಡು ಹೊಸ ತಂತ್ರ: TCSಗೆ 99 ಪೈಸೆಗೆ ಭೂಮಿ ಮಂಜೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರ ಪ್ರದೇಶದಲ್ಲಿಯೂ ಐಟಿ ಕಂಪನಿಗಳನ್ನು ಆಕರ್ಷಿಸಿ ಅಭಿವೃದ್ಧಿಯತ್ತ ಕೊಂಡ್ಯಯಲು ಚಂದ್ರಬಾಬು ನಾಯ್ಡು ತಯಾರಿ ನಡೆಸುತ್ತಿದ್ದಾರೆ. ಅದಕ್ಕೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ಹೊಸ ಕೇಂದ್ರವನ್ನು ಆಂಧ್ರ ಪ್ರದೇಶದಲ್ಲಿ ಸ್ಥಾಪಿಸಲು ಮುಂದಾಗಿರುವುದೇ ಇದಕ್ಕೆ ಉದಾಹರಣೆ.

ಪ್ರಮುಖ ಐಟಿ ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ, ಆಂಧ್ರಪ್ರದೇಶ ಸರ್ಕಾರವು ವಿಶಾಖಪಟ್ಟಣದಲ್ಲಿ 21.16 ಎಕರೆ ಭೂಮಿಯನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗೆ ಕೇವಲ 99 ಪೈಸೆಯ ಸಾಂಕೇತಿಕ ಬೆಲೆಗೆ ಮಂಜೂರು ಮಾಡಿದೆ.

ಐಟಿ ಸಚಿವ ನಾರಾ ಲೋಕೇಶ್ ಅವರು 2024ರ ಅಕ್ಟೋಬರ್‌ನಲ್ಲಿ ಮುಂಬೈನ ಟಾಟಾ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಟಿಸಿಎಸ್​​ಗೆ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ನಂತರ ನಡೆದ ಚರ್ಚೆಗಳು ನಡೆದು, 99 ಪೈಸೆಯಂತಹ ಸಾಂಕೇತಿಕ ಬೆಲೆಗೆ ಭೂಮಿ ನೀಡುವುದಾಗಿ ಒಪ್ಪಿಗೆಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!