ಕಂಗನಾ,ರಾಘವ ನಟನೆಯ ಚಂದ್ರಮುಖಿ 2 ಸಿನಿಮಾದ ಟ್ರೈಲರ್ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) , ತಮಿಳು ನಟ ರಾಘವ ಲಾರೆನ್ಸ್ (Raghava Lawrence) ನಟನೆಯ ಚಂದ್ರಮುಖಿ 2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೆ.15ಕ್ಕೆ ಚಂದ್ರಮುಖಿ 2 ( ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಸಿನಿಮಾದ ಟ್ರೈಲರ್‌ ಕುತೂಹಲಕಾರಿಯಾಗಿದೆ.

ಚಿತ್ರದ ಟ್ರೈಲರ್‌ನಲ್ಲಿ ದೊಡ್ಡ ಅವಿಭಕ್ತ ಕುಟುಂಬವೊಂದು ಅರಮನೆಯಂತಹ ಬಂಗಲೆಯಲ್ಲಿ ಒಂದು ಕೋಣೆಯನ್ನು ಮಾತ್ರ ಪ್ರವೇಶಿಸಬಾರದು. ಅದು ಬಂಗಲೆಯ ದಕ್ಷಿಣ ಬ್ಲಾಕ್‌ನಲ್ಲಿರುವ ಕೋಣೆ. ಇದರ ಬಾಗಿಲು ತೆಗೆದರೆ ಸಮಸ್ಯೆಗಳು ಶುರುವಾಗುತ್ತವೆ. ಚಂದ್ರಮುಖಿ ಕಥೆಗೆ 17 ವರ್ಷಗಳ ನಂತರ ಹೊಸ ತಿರುವು ಸಿಗುತ್ತದೆ. 200 ವರ್ಷಗಳಷ್ಟು ಹಳೆಯದಾದ ಚಂದ್ರಮುಖಿ ಮತ್ತು ರಾಜ ವೆಟ್ಟೈಯನ್ ಅವರ ಸೇಡಿನ ಕಥೆ. ಈ ಕಥೆಯನ್ನು ವರ್ತಮಾನಕ್ಕೆ ಹೊಂದಿಸಿರುವುದನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ.

ಪಿ. ವಾಸು ನಿರ್ದೇಶನದ ಚಂದ್ರಮುಖಿ 2ನಲ್ಲಿ ರಾಘವ ಲಾರೆನ್ಸ್, ಕಂಗನಾ, ರಾಧಿಕಾ ಶರತ್ ಕುಮಾರ್, ವಡಿವೇಲು, ಲಕ್ಷ್ಮಿ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಆಸ್ಕರ್ ವಿಜೇತ ಎಂ.ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!