ಗೆಳೆಯನಿಗೆ ಸ್ವಾಗತ ನೀಡಿದ ಚಂದ್ರಯಾನ- 2: ‘ಆರ್ಬಿಟರ್ ಸ್ಯಾಟಲೈಟ್’ ಜೊತೆ ವಿಕ್ರಮ್ ಲ್ಯಾಂಡರ್ ಸಂಪರ್ಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಇಸ್ರೋ ಚಂದ್ರಯಾನ -3 ಬಾಹ್ಯಾಕಾಶ ನೌಕೆಯ ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಚಂದ್ರನ ಹೊಸ ಚಿತ್ರಗಳನ್ನು ಹಂಚಿಕೊಂಡಿತ್ತು, ಇದೀಗ ಆರ್ಬಿಟರ್ ಸ್ಯಾಟಲೈಟ್ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧಿಸಿದೆ ಎಂಬ ಮಾಹಿತಿಯನ್ನು ಇಸ್ರೋ ಅಧಿಕಾರಿಗಳು ನೀಡಿದ್ದಾರೆ.

‘ಚಂದ್ರಯಾನ 3ಅನ್ನು ಚಂದ್ರಯಾನ 2 ಔಪಚಾರಿಕವಾಗಿ ಸ್ವಾಗತಿಸಿದೆ. ಚಂದ್ರಯಾನ 3 ಲ್ಯಾಂಡರ್‌ ಹಾಗೂ ಚಂದ್ರಯಾನ 2ರ ಆರ್ಬಿಟರ್‌ ಮಧ್ಯೆ ದ್ವಿಮುಖ ಸಂವಹನ ಸಾಧ್ಯವಾಗಿದೆ. ಲ್ಯಾಂಡರ್‌ ಮಾಡ್ಯೂಲ್‌ ಜತೆ ಸಂಪರ್ಕ ಸಾಧಿಸಲು ಮತ್ತಷ್ಟು ದಾರಿ ಸಿಕ್ಕಂತಾಗಿದೆ’ ಎಂದು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.

ಲ್ಯಾಂಡರ್ ಬುಧವಾರ ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಸ್ಪರ್ಶಿಸಲಿದೆ. ಇದು ಯಶಸ್ವಿಯಾದರೆ ಅಮೆರಿಕ, ರಷ್ಯಾ ಮತ್ತು ಚೀನಾ ಸೇರಿ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!