ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋದಿಂದ ಚಂದ್ರಯಾನ 3 ನೌಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಭಾರತದ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ.
ಆದ್ರೆ ಇತ್ತ ಪಾಕ್ ಗೆ ಯಾಕೋ ಭಾರತದ ಈ ಸಾಧನೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇದಕ್ಕೆ ಅಲ್ಲಿನ ಪಾಕಿಸ್ತಾನ ಮಾಜಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫಾವದ್ ಚೌಧರಿ ಹೇಳಿಕೆ ಸಾಕ್ಷಿ.
ಫಾವದ್ ಚೌಧರಿ ಹೇಳುವಂತೆ, ಚಂದ್ರಯಾನ 3 ನೌಕೆ ಉಡಾವಣೆ ಏನು ಸಾಧನೆಯಲ್ಲ ಎಂದಿದೆ. ಇಷ್ಟೇ ಅಲ್ಲ ಚಂದ್ರಯಾನಕ್ಕೆ ಇಷ್ಟು ಸುದೀರ್ಘ ದಿನಗಳ ಅವಶ್ಯಕತೆ ಇಲ್ಲ. ಚಂದ್ರ ಎಲ್ಲಿದ್ದಾನೆ ಅನ್ನೋ ಲೋಕೇಶನ್ ಗೊತ್ತಿದೆ. ಮತ್ಯಾಕೆ ಸುದೀರ್ಘ ಪ್ರಯಾಣ ಎಂದ ಹೇಳಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಫಾವದ್ ಚೌಧರಿ, ಚಂದ್ರನತ್ತ ಪ್ರಯಾಣಿಸಲು ಇಷ್ಟು ಸುದೀರ್ಘ ದಿನಗಳ ಅವಶ್ಯಕತೆ ಇಲ್ಲ. ಚಂದ್ರನ ಲೋಕೇಶನ್ ಗೊತ್ತಿದೆ. ಚಂದ್ರನಿರುವ ದೂರ ಗೊತ್ತಿದೆ. ಹೀಗಿರುವಾಗ ಸುದೀರ್ಘ ಪ್ರಯಾಣದ ಮೂಲಕ ಚಂದ್ರನ ತಲುಪುವ ಚಂದ್ರಯಾನ 3 ನೌಕೆ ಯೋಜನೆ ಸರಿ ಇಲ್ಲ ಎಂದಿದ್ದಾರೆ.
ಫಾವದ್ ಚೌಧರಿ ಮಾತಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಚಂದ್ರಯಾನ, ವಿಜ್ಞಾನ, ಬಾಹ್ಯಕಾಶದ ಎಬಿಸಿಡಿ ಗೊತ್ತಿಲ್ಲದವರು ಮಾತನಾಡಿದರೇ ಹೀಗೆ ಆಗಲಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಜುಲೈ 14 ರಂದು ಇಸ್ರೋ ಶ್ರೀಹರಿಕೋಟಾದಿಂದ ಚಂದ್ರಯಾನ 3 ವ್ಯೋಮನೌಕೆಯನ್ನು ಉಡಾವಣೆ ಮಾಡಿದೆ. ಪ್ರತಿ ಹಂತದಲ್ಲೂ ಭಾರತ ಯಶಸ್ಸು ಸಾಧಿಸಿದೆ. ಭಾರತ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಂದ್ರಯಾನ 3 ನೌಕೆಯನ್ನು ಉಡಾವಣೆ ಮಾಡಿದೆ.