ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಇಲಾಖೆಯಲ್ಲಿ ಕಾರ್ಯಕಾರ್ಯೇತರ (Non -Excutive) ಹುದ್ದೆ ಆದೇಶ ಮಾರ್ಪಾಡು ಮಾಡಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ರಿಂದ ಬುಧವಾರ ಆದೇಶ ಹೊರಡಿಸಿದ್ದಾರೆ.
ಬಡ್ತಿ ಪಡೆದ ಇನ್ಸ್ಪೆಕ್ಟರ್, ಡಿವೈಎಸ್ಪಿ ಕನಿಷ್ಠ 2 ವರ್ಷ ಮತ್ತು ಬಡ್ತಿ ಪಡೆದ ಅಧಿಕಾರಿಗಳು ನಾನ್ ಎಕ್ಸಿಕ್ಯೂಟಿವ್ ಹುದ್ದೆ ನಿರ್ವಹಿಸಬೇಕು ಎಂದು ಮೇ 15ರಂದು ಗೃಹ ಇಲಾಖೆಯಿಂದ ಆದೇಶ ಹೊರಡಿಸಿತ್ತು. ಆದರೆ ಬಡ್ತಿ ಪಡೆದ ಅಧಿಕಾರಿಗಳು ಕನಿಷ್ಠ 1 ವರ್ಷ ಮಾತ್ರ ಕೆಲಸ ಮಾಡಬೇಕು. ನಾನ್ ಎಕ್ಸಿಕ್ಯೂಟಿವ್ ಹುದ್ದೆ ನಿರ್ವಹಿಸಬೇಕೆಂದು ಆದೇಶ ಮಾರ್ಪಾಡು ಮಾಡಿದೆ.
ಪೊಲೀಸ್ ಇಲಾಖೆಯಲ್ಲಿ ಪದೋನ್ನತಿ ಹೊಂದಿದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಉಪಾಧೀಕ್ಷಕರು (ಸಿವಿಲ್) ರವರುಗಳಿಗೆ ಕಡ್ಡಾಯವಾಗಿ ಕನಿಷ್ಟ 2 ವರ್ಷದ ಸೇವೆಯನ್ನು ಕಾರ್ಯಕಾರ್ಯತರ (Non-Executive) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಿದೆ.