Saturday, December 13, 2025

ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯ: ಸಿಎಂ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚನ್ನಬಸವ ಸ್ವಾಮೀಜಿ ಅವರು 97ನೇ ವಯಸ್ಸಿನಲ್ಲಿ ಲಿಂಗೈಕ್ಯರಾಗಿದ್ದಾರೆ.ಬಸವಾದಿ ಶರಣರ ವಚನಗಳು, ಮಾನವೀಯತೆ, ಸಮಾನತೆ ಸಂದೇಶಗಳನ್ನ ಶಿಲೆಯಲ್ಲಿ ಶ್ರೀಗಳು ಕೆತ್ತಿಸಿದ್ದರು. ಅಲ್ಲದೇ ಅವುಗಳನ್ನ ಶಿಲಾಮಂಟಪದಲ್ಲಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನೂ ಇಂಗಳೇಶ್ವರದಿಂದ ಶ್ರೀಕ್ಷೇತ್ರ ಉಳವಿಯವರೆಗೆ ಪಾದಯಾತ್ರೆ ನಡೆಸಿ, ವಚನ ಸಾರಗಳನ್ನ ಜನಸಾಮಾನ್ಯರಲ್ಲಿ ಬಿತ್ತುವ ಕಾರ್ಯಮಾಡಿದ್ದರು.

ಸ್ವಾಮೀಜಿ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾಳೆ ಸಾಯಂಕಾಲ ಸರ್ಕಾರಿ ಗೌರವಗಳೊಂದಿಗೆ ಸ್ವಾಮೀಜಿಗಳ ಅಂತ್ಯಕ್ರಿಯೆ ನೆರವೇರಲಿದೆ.

error: Content is protected !!