ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಕಡ್ಲೆಬೇಳೆ
ಹಸಿಮೆಣಸು
ಈರುಳ್ಳಿ
ಕ್ಯಾರೆಟ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಕಿ, ನಂತರ ಕಡ್ಲೆಬೇಳೆ ಹಾಕಿ ಮಿಕ್ಸ್ ಮಾಡಿ
ನಂತರ ಹಸಿಮೆಣಸು ಹಾಕಿ ಫ್ರೈ ಮಾಡಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಕ್ಯಾರೆಟ್ ತುರಿ ಹಾಗೂ ಉಪ್ಪು ಹಾಕಿ
ನೀರು ಹೋಗುವವರೆಗೂ ಬಾಡಿಸಿದ್ರೆ ಪಲ್ಯ ರೆಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ
ಈ ಪಲ್ಯ ಖಾರ ಇದ್ದಷ್ಟು ರುಚಿ, ತುಪ್ಪ ಹಾಕಿಕೊಂಡು ಚಪಾತಿ ಜೊತೆ ತಿನ್ನಿ