ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ನೆರಳು ಜನರಿಂದ ದೂರ ಸರಿದಿದ್ದು, ಈ ಬಾರಿ ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ಕೇದಾರನಾಥ ಹಾಗೂ ಬದ್ರಿನಾಥಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಇದೀಗ ಯಾತ್ರಾ ಸಮಯ ಮುಕ್ತಾಯವಾಗಿದೆ.
ಈ ಬಾರಿ ಚಾರ್ ಧಾಮ್ ಯಾತ್ರೆಯಲ್ಲಿ ಹೆಲಿಕಾಪ್ಟರ್ ಕಂಪನಿಗಳಿಗಿಂತ ಹೆಚ್ಚು ಲಾಭ ಮಾಡಿದ್ದು ಸ್ಥಳೀಯ ಕುದುರೆ-ಕತ್ತೆ ಮಾಲೀಕರು. ಒಟ್ಟಾರೆ ಯಾತ್ರೆಯಿಂದ 211ಕೋಟಿ ರೂ. ಆದಾಯ ಬಂದಿದ್ದು, 109.98 ಕೋಟಿ ರೂ ಆದಾಯ ಬಂದಿದ್ದು ಕುದುರೆ, ಕತ್ತೆ ಮತ್ತು ಡೋಲಿ ಮಾಲೀಕರಿಂದ.
ಈ ಬರಿ ದೇವಾಲಯದ ಆಡಳಿತವು ಸುಮಾರು 15 ಸಾವಿರ ಕುದುರೆ ಮತ್ತು ಕತ್ತೆ ಮಾಲೀಕರನ್ನು ನೋಂದಾಯಿಸಿದ್ದು, ಸುಮಾರು 5.34 ಲಕ್ಷ ಯಾತ್ರಾರ್ಥಿಗಳು ಕುದುರೆ ಮತ್ತು ಹೇಸರಗತ್ತೆ ಸವಾರಿ ಬಳಸಿದ್ದಾರೆ.
ಕಳೆದ ಬಾರಿ ಕೊರೋನಾದಿಂದ ಕಳೆಗಟ್ಟಿದ ಪ್ರವಾಸೋದ್ಯಮ ಇದೀಗ ಚಿಗುರಿದ್ದು, ಕಳೆದ ಬಾರಿಯ ನಷ್ಟ ಕೂಡ ಈ ಬಾರಿ ಭರಿಸುವಷ್ಟು ಲಾಭವಾಗಿದೆ. ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ಹೊಟೇಲ್, ಹೋಂಸ್ಟೇ ಹಾಗೂ ಲಾಡ್ಜ್‌ಗಳು ಆರು ತಿಂಗಳು ಮುಂಚಿತವಾಗಿಯೇ ಬುಕ್ಕಿಂಗ್ ಪಡೆದಿವೆ.