ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಪನ್‌ಎಐನ ಪ್ರಸಿದ್ಧ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್, ChatGPT ಭಾರತ ಸೇರಿದಂತೆ ಪ್ರಪಂಚದಾದ್ಯಂತ ಡೌನ್ ಆಗಿದೆ.
ಚಾಟ್‌ಜಿಪಿಟಿಯ ಸ್ಟೇಟಸ್ ಪುಟದಲ್ಲಿ ಓಪನ್‌ಎಐ, ಚಾಟ್‌ಜಿಪಿಟಿ ಈ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒಪ್ಪಿಕೊಂಡಿದೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಚಾಟ್‌ಜಿಪಿಟಿಯನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ.
ಚಾಟ್‌ಜಿಪಿಟಿ ಡೌನ್ ಆಗುವುದರ ಜೊತೆಗೆ, ಬಳಕೆದಾರರಿಗೆ ಅವರ ಹಳೆಯ ಚಾಟ್‌ಗಳನ್ನು ಸಹ ತೋರಿಸುತ್ತಿಲ್ಲ. ಓಪನ್ ಎಐ ಸ್ಟೇಟಸ್ ಪುಟದಲ್ಲಿ ಇದು ಶೀಘ್ರದಲ್ಲೇ ಸರಿ ಆಗಲಿದೆ ಎಂದು ಹೇಳಿದೆ.