ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಮುಖಂಡ ಮತ್ತು ಪೆರುಂಬವೂರು ಯುಡಿಎಫ್ ಶಾಸಕ ಎಲ್ದೋಸ್ ಕುನ್ನಪಿಲ್ಲಿ ವಿರುದ್ಧ ಮಹಿಳೆ ಲೈಂಗಿಕ ದೌರ್ಜನ್ಯದ ದೂರು ನೀಡಿದ ಹಿನ್ನೆಲೆ ತಿರುವನಂತಪುರಂನ ಕೋವಲಂ ಪೊಲೀಸರು ಜಾಮೀನು ರಹಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಮಹಿಳೆ, ಶಾಸಕ ತಮ್ಮನ್ನು ಮದುವೆಯಾಗುವುದಾಗಿ ಹಲವು ಬಾರಿ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಶಾಸಕರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋವಲಂ ಪೊಲೀಸರು ಐಪಿಸಿ ಸೆಕ್ಷನ್ 359 (ಅಪಹರಣ), 443 (ಅತಿಕ್ರಮಣ) ಮತ್ತು 354 (ಮಹಿಳೆಗೆ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಕ್ರಿಮಿನಲ್ ಫೋರ್ಸ್) ಅಡಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆಯನ್ನು ಕೋವಲಂ ಠಾಣೆಗೆ ಕರೆಸಿ, ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಮಹಿಳೆ ಎರ್ನಾಕುಲಂನ ಪೆರುಂಬವೂರ್‌ನಿಂದ ನಾಪತ್ತೆಯಾದ ನಂತರ ಮಹಿಳೆಯ ಸ್ನೇಹಿತ ವಂಚಿಯೂರ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ನಂತರ ಪೊಲೀಸರು ಅವರನ್ನು ಕೋವಲಂನಲ್ಲಿ ಪತ್ತೆಹಚ್ಚಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.