ಅಪರಚಿತ ವಾಹನ ಡಿಕ್ಕಿ ಹೊಡೆದು ಚಿರತೆ ಸಾವು

 ಹೊಸದಿಗಂತ ವರದಿ, ಮಳವಳ್ಳಿ:

ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸಾವು ಬದುಕಿನ ನಡುವೆ ಒದ್ದಾಡುತ್ತಾ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುರುವಾರ ಸಂಜೆ ಬಾಚನಹಳ್ಳಿ ಸಮೀಪದಲ್ಲಿ ಈ ಘಟನೆ ಜರುಗಿದ್ದು,ತೀವ್ರ ಗಾಯಗೊಂಡ ಚಿರತೆ ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವ ದೃಶ್ಯ ಮನ ಕಲಕುವಂತಾಗಿತ್ತು,ಒದ್ದಾಡುತ್ತಾ ಅಂತಿಮ ಉಸಿರು ಬಿಟ್ಟ ಚಿರತೆಯನ್ನು ತಕ್ಷಣ ಪೋಲಿಸರು ,ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆ ಕೊಡಿಸಲು ಮುಂದದರು ಆದರೆ ಪ್ರಯೋಜನವಾಗಿಲ್ಲ.ನಂತರ ಸತ್ತ ಚಿರತೆಯನ್ನು ಅರಣ್ಯ ಇಲಾಖೆ ಕಛೇರಿ ಅವರಣದಲ್ಲಿರಿಸಲಾಗಿದ್ದು,ವೈದೈಕೀಯ ಪರೀಕ್ಷೆ ನಂತರ ಇಲಾಖೆ ನಿಯಮಾನುಸಾರ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮಹದೇವು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!