ಹೊಸದಿಗಂತ ಡಿಜಿಟಲ್ ಡೆಸ್ಕ್:
“ಸಿಕಂದರ್” ನಂತರ ರಶ್ಮಿಕಾ ಮಂದಣ್ಣ ಅವರು ಮತ್ತೊಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ “ಕುಬೇರಾ” ಬಿಡುಗಡೆಗೆ ಸಜ್ಜಾಗುತ್ತಿದೆ. ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ನಿರ್ಮಿತವಾಗಿರುವ ಈ ಸಿನಿಮಾ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದೀಗ ಚಲನಚಿತ್ರದ ತಾರಾಗಣ ಚೆನ್ನೈನಲ್ಲಿ ಪ್ರಚಾರ ಆರಂಭಿಸಿದೆ.
ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಚನ್ನೈ ಪ್ರವಾಸದ ಫೋಟೋ ಹಂಚಿಕೊಂಡಿದ್ದು, ಅದರಲ್ಲಿ ಚೆನ್ನೈ ನಗರದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ನನ್ನ ಬಾಲ್ಯ ಇಲ್ಲಿ ಕಳೆದ ಕಾರಣಕ್ಕೆ ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ. ಈ ನಗರ ನನಗೆ ಬಹಳ ಪ್ರೀತಿಯದು” ಎಂದು ಅವರು ಬರೆದಿದ್ದಾರೆ.
“ಕುಬೇರಾ” ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಧನುಷ್, ನಾಗಾರ್ಜುನ ಮತ್ತು ಜಿಮ್ ಸರ್ಭ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ಮಾಣ ವಿನ್ಯಾಸ ಕಾರ್ಯವನ್ನು ರಾಮಕೃಷ್ಣ ಸಬ್ಬಾನಿ ಮತ್ತು ಮೋನಿಕಾ ನಿಗೋತ್ರೆ ನಿರ್ವಹಿಸಿದ್ದಾರೆ. ನಿಕೇತ್ ಬೊಮ್ಮಿ ಕ್ಯಾಮೆರಾ ಕೆಲಸ ಮಾಡಿದ್ದು, ಚೈತನ್ಯ ಪಿಂಗಲಿ ಸಹ-ಕಥೆ ಬರೆದಿದ್ದಾರೆ. ವೇಷಭೂಷಣ ವಿನ್ಯಾಸ ಕಾವ್ಯ ಶ್ರೀರಾಮ್ ಮತ್ತು ಪೂರ್ವಾ ಜೈನ್ ಅವರಿಂದ.
ಈ ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರವು ಸಾಮಾಜಿಕ ಥ್ರಿಲ್ಲರ್ ಆಗಿದ್ದು, ಜನಜಾಗೃತಿ ಹಾಗೂ ರೋಚಕತೆ ಎರಡನ್ನೂ ಒಳಗೊಂಡಿದೆ.
“ಶ್ರೀ ವೆಂಕಟೇಶ್ವರ ಸಿನಿಮಾಸ್” ಬ್ಯಾನರ್ನಲ್ಲಿ ಸುನಿಯೆಲ್ ನರನ್ ಮತ್ತು ಪುಸ್ಕೂರ್ ರಾಮ್ ಮೋಹನ್ ರಾವ್ ನಿರ್ಮಾಣ ಮಾಡಿರುವ “ಕುಬೇರಾ” ಜೂನ್ 20, 2025 ರಂದು ಬಿಡುಗಡೆಯಾಗಲಿದೆ.
View this post on Instagram