ಚೇತನ್ ಮಾನಸಿಕ ಅಸ್ವಸ್ಥ: ಆ ದಿನಗಳು ನಟನ ವಿರುದ್ಧ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಳುನಾಡಿನ ದೈವಾರಾಧನೆಯನ್ನು ಬಿಂಬಿಸುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾವು ರಾಜ್ಯ,ದೇಶ ಮಾತ್ರವಲ್ಲದೆ ವಿದೇಶದಲ್ಲೂ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ತರುವ ವಿಚಾರವಾಗಿದೆ. ಈ ನಡುವೆ ನಟ ಚೇತನ್ ತುಳುನಾಡಿನ ದೈವಾರಾಧನೆ ಹಿಂದೂ ಸಂಸ್ಕೃತಿಯ ಮೂಲವೇ ಅಲ್ಲ. ಹಿಂದೂ ಧರ್ಮಕ್ಕೂ ತುಳುನಾಡಿನ ದೈವಾರಾಧನೆಗೂ ಯಾವುದೇ ಸಂಬಂಧವಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್, ನಟ ಚೇತನ್ ಹಿಂದೂ ಎಂಬುವುದೇ ನನಗೆ ಸಂಶಯ ಅವರನ್ನೊಮ್ಮೆ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿ ಚಿಕಿತ್ಸೆ ನೀಡಬೇಕಾಗಿದೆ.ಮಾನಸಿಕ ಅಸ್ವಸ್ಥ ರಾಗಿರುವ ನಟ ಚೇತನ್ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸಲು ಮತ್ತು ಶಾಂತಿ ಕದಡಲು ಇಂತಹ ಹೇಳಿಕೆಯನ್ನು ಪ್ರಚಾರಕ್ಕಾಗಿ ನೀಡುತ್ತಾರೆ.ಇಂತಹ ನಟರನ್ನು ಸಮಾಜವು ಬಹಿಷ್ಕರಿಸಬೇಕು ಎಂದು ಉಮಾನಾಥ್ ಕೋಟ್ಯಾನ್ ಕಿಡಿಕಾರಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಶಾಸಕರು, ದೈವಾರಾಧನೆಗೆ ಅದರದ್ದೇ ಆದಂತಹ ನಂಬಿಕೆಗಳಿವೆ. ತುಳುನಾಡಿನಲ್ಲಿ ದೈವಾರಾಧನೆ ನಾಗಾರಾಧನೆ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾಗಿದ್ದು. ಎಡಪಂಥೀಯರು ಕೂಡ ತಮಗೆ ಸಂಕಟ ಬಂದಾಗ ದೈವಗಳು ಮತ್ತು ನಾಗದೇವರ ಮೊರೆ ಹೋಗುವುದನ್ನು ನಾವು ಕಂಡಿದ್ದೇವೆ.ಅಂಥದ್ದರಲ್ಲಿ ಈ ನಟ ಚೇತನ್ ಯಾವ ಲೆಕ್ಕಕ್ಕೂ ಅಲ್ಲ.ಇಂಥವರನ್ನು ಬಹಿಷ್ಕರಿಸಬೇಕು ಎಂದು ಶಾಸಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!