ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
* ಹೂಕೋಸು – 1
ಹಸಿರು ಬೀನ್ಸ್ – 200 ಗ್ರಾಂ (ಸಣ್ಣದಾಗಿ ಹೆಚ್ಚಿದ)
* ಸಾಸಿವೆ – 1 tbsp
*ಉದ್ದಿನ ಬೇಳೆ – 1 tbsp
* ಕರಿಬೇವಿನ ಎಲೆ – ಸ್ವಲ್ಪ
* ಮೆಣಸಿನ ಪುಡಿ – 1 tbsp
* ಅರಿಶಿನ ಪುಡಿ – 1/2 tbsp
* ಉಪ್ಪು – ರುಚಿಗೆ
* ಎಣ್ಣೆ – 1 tbsp
ಮಾಡುವ ವಿಧಾನ:
ಮೊದಲು ತರಕಾರಿಗಳನ್ನು ಸರಿಯಾದ ಗಾತ್ರದಲ್ಲಿ ಕತ್ತರಿಸಬೇಕು. ನಂತರ ಅವುಗಳನ್ನು ಉಪ್ಪು ನೀರಿನಲ್ಲಿ ಹಾಕಿ ತೊಳೆದು ಪಕ್ಕಕ್ಕೆ ಇರಿಸಿ
ನಂತರ ಹೂಕೋಸು ಮತ್ತು ಬೀನ್ಸ್ ಎರಡನ್ನೂ ಕುದಿಯುವ ನೀರಿಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಮೃದುವಾಗುವವರೆಗೆ ಬೇಯಿಸಿ, ನಂತರ ನೀರಿನಿಂದ ಬೇರ್ಪಡಿಸಿ.
ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಕರಿಯಲು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಉದ್ದಿನ ಬೇಳೆ(ನಿಮ್ಮಿಷ್ಟದ ಬೇಳೆ) ಹಾಕಿ.ನಂತರ ಕರಿಬೇವು, ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಬೇಯಿಸಿದ ತರಕಾರಿಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. 2 ನಿಮಿಷಗಳ ಕಾಲ ಮಸಾಲೆಗಳೊಂದಿಗೆ ತರಕಾರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ರುಚಿಕರವಾದ ಚೆಟ್ಟಿನಾಡ್ ಹೂಕೋಸು ಬೀನ್ಸ್ ಫ್ರೈ ಸಿದ್ಧವಾಗಿದೆ.