ಬಾಯಿಯಿಂದ ಬರುವ ದುರ್ವಾಸನೆ ಅನೇಕ ಸಂದರ್ಭದಲ್ಲಿ ಸಾಮಾಜಿಕ ಹಾಗೂ ವ್ಯಕ್ತಿಗತ ಸಂಬಂಧಗಳಿಗೆ ಅಡಚಣೆ ಉಂಟುಮಾಡುತ್ತದೆ. ಕೆಲವೊಮ್ಮೆ ಪ್ರತಿದಿನ ಹಲ್ಲುಜ್ಜಿದರೂ ದುರ್ವಾಸನೆ ಕಡಿಮೆಯಾಗದೆ ದೊಡ್ಡ ತೊಂದರೆ ನೀಡುತ್ತದೆ. ಈ ಸಮಸ್ಯೆಯನ್ನು ನಿವಾರಿಸೋಕೆ ಮನೆಯಲ್ಲೇ ಸಿಗುವ ಕೆಲವು ನೈಸರ್ಗಿಕ ವಿಧಾನಗಳು ಸಹಾಯಕವಾಗುತ್ತವೆ.
- ಪುದೀನ ಎಲೆ: ಪುದೀನ ಎಲೆಗಳನ್ನು ಅಗಿದು ಸೇವಿಸುವುದರಿಂದ ಬಾಯಿ ತಂಪಾಗುತ್ತದೆ ಮತ್ತು ದುರ್ವಾಸನೆ ಶಾಶ್ವತವಾಗಿ ಕಡಿಮೆಯಾಗುತ್ತದೆ.
- ಲವಂಗ: ಬೆಳಿಗ್ಗೆ ಬ್ರಷ್ ಮಾಡಿದ ಬಳಿಕ ಲವಂಗವನ್ನು ಅಗಿಸುವುದರಿಂದ ಬಾಯಿಯ ವಾಸನೆ ಕಡಿಮೆಯಾಗುತ್ತದೆ. ಇದರಿಂದ ಹಲ್ಲುಗಳ ಆರೋಗ್ಯವೂ ಸಹ ಕಾಪಾಡಬಹುದು.
- ನೀರಿನ ಸೇವನೆ: ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ಬಾಯಿ ಒಣಗದೆ, ದುರ್ವಾಸನೆ ಕಡಿಮೆಯಾಗುತ್ತದೆ.
- ಸಾಸಿವೆ ಎಣ್ಣೆ ಮತ್ತು ಉಪ್ಪು ಮಸಾಜ್: ಸಾಸಿವೆ ಎಣ್ಣೆಗೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲು ಮತ್ತು ಒಸಡು ಹಾಗು ನಾಲಗೆಯ ಭಾಗದಲ್ಲಿ ಮಸಾಜ್ ಮಾಡಿದರೆ, ದುರ್ವಾಸನೆ ಕಡಿಮೆಯಾಗುತ್ತದೆ ಮತ್ತು ಹಲ್ಲು ಹೊಳೆಯುತ್ತದೆ.
- ತೆಂಗಿನ ಎಣ್ಣೆ: ಸ್ವಲ್ಪ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಇಟ್ಟು ಕೆಲವು ನಿಮಿಷಗಳ ನಂತರ ತೊಳೆಯುವುದರಿಂದ ಬಾಯಿಯ ದುರ್ವಾಸನೆ ಹೋಗುತ್ತದೆ.