ತೆಲಂಗಾಣ ಸಿಎಂ ಕೆಸಿಆರ್​ ರನ್ನು ಭೇಟಿಯಾದ ಛತ್ರಪತಿ ಶಿವಾಜಿ 13ನೇ ಉತ್ತರಾಧಿಕಾರಿ ಸಂಭಾಜಿ ರಾಜೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ರಪತಿ ಶಿವಾಜಿಯ 13ನೇ ಉತ್ತರಾಧಿಕಾರಿ, ಕೊಲ್ಹಾಪುರದ ಸಾಹು ಮಹಾರಾಜ್​ ಅವರ ಮೊಮ್ಮಗ ಮಾಜಿ ಸಂಸದ ಸಂಭಾಜಿ ರಾಜೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​​​ ಅವರನ್ನು ಹೈದರಾಬಾದ್​ನ ಪ್ರಗತಿಭವನದಲ್ಲಿ ಭೇಟಿಯಾಗಿದ್ದಾರೆ.

ಇದೇ ವೇಳೆ, ಇಬ್ಬರು ನಾಯಕರು, ದೇಶದ ರಾಜಕೀಯ ಸ್ಥಿತಿಗತಿ ಮತ್ತು ಇತರೆ ವಿಷಯದ ಬಗ್ಗೆ ಚರ್ಚೆ ನಡೆಸಿದ್ದು, ತೆಲಂಗಾಣದಲ್ಲಿನ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮದ ಕುರತು ರಾಜೆ, ಕೆಸಿಆರ್​ ಬಳಿ ಮಾಹಿತಿ ಪಡೆದರು. ತೆಲಂಗಾಣ ಮಾದರಿ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಮಹಾರಾಷ್ಟ್ರದಲ್ಲೂ ಅಳವಡಿಸಬೇಕು. ಮಹಾರಾಷ್ಟ್ರ ಮಾತ್ರವಲ್ಲದೇ ದೇಶಾದ್ಯಂತ ತೆಲಂಗಾಣ ಮಾದರಿ ಪಸರಿಸಬೇಕು ಎಂದು ಸಂಭಾಜಿ ರಾಜೆ ತಿಳಿಸಿದರು. ರಾಷ್ಟ್ರೀಯ ಸಮಗ್ರತೆ, ಅಭಿವೃದ್ಧಿ ಮತ್ತು ದೇಶದ ಜನರ ಕಲ್ಯಾಣದಲ್ಲಿ ಅವಿಷ್ಕಾರದ ಅಜೆಂಡಾದ ಅವಶ್ಯಕತೆ ಇದೆ ಎಂದರು.

ಚುನಾವಣಾ ಭರವಸೆ ಹೊರತು ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯಿಂದ ಕೆಸಿಆರ್​ ಕಾರ್ಯ ನಿರ್ವಹಿಸುತ್ತಿದ್ದಾರೆ. 14 ವರ್ಷದ ತೆಲಂಗಾಣ ಆಡಳಿತದಲ್ಲಿ ಅನೇಕ ಅಭಿವೃದ್ಧಿಯನ್ನು ತಂದಿದ್ದಾರೆ. ಕೃಷಿ ನೀತಿ, ನೀರಾವರಿ, ಸಾರ್ವಜನಿಕ ಸೇರಿದಂತೆ ಹಲವು ಯೋಜನೆಗಳನ್ನು ಬಡವರಿಗಾಗಿ ತಂದಿದ್ದಾರೆ ಎಂದು ಅವರ ಆಡಳಿತ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಸಂಭಾಜಿ ರಾಜೆ ಅವರು ‘ರಾಜಶ್ರೀ ಸಾಹು ಛತ್ರಪತಿ’ ಪುಸ್ತಕವನ್ನು ಸಿಎಂ ಕೆಸಿಆರ್​ಗೆ ನೀಡಿದರು. ಸಚಿವರಾದ ಪ್ರಶಾಂತ್​ ರೆಡ್ಡಿ, ಮಲ್ಲರ್​ ರೆಡ್ಡಿ, ಎಂಎಲ್​ಸಿ ಕವಿತಾ, ಮಧುಸೂಧನ್​ಆಚರಿ, ಪಲ್ಲ ರಾಜೇಶ್ವರಿ ರೆಡ್ಡಿ ಮತ್ತು ಇತರರು ಸಭೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!