ಚಿಕನ್ ಕಬಾಬ್ ತಿಂದೆ ತುಂಬಾ ಹೆಲ್ತಿ ಅದು, ಚಿಕನ್ ಪಾಪ್‌ಕಾರ್ನ್ ತಿಂದೆ, ಡೀಪ್‌ಫ್ರೈಡ್ ಟೇಸ್ಟಿ ಚಿಕನ್ ತಿಂದೆ ರುಚಿ ಅದ್ಭುತ ಹಂಗೇ ಹೆಲ್ತಿ ಅನ್ಕೋತೀರಾ? ಎಣ್ಣೆ ಸುರಿದುಕೊಂಡು ಮಾಡೋ ಯಾವ ಅಡುಗೆಯೂ ಹೆಲ್ತಿ ಅಲ್ಲ. ಕ್ಯಾಲೋರಿ ಬಗ್ಗೆ ಗಮನವೇ ಇಲ್ಲವಾದರೆ ತೂಕ ಇಳಿಸಿ ಆರೋಗ್ಯವಾಗಿರೋಕೆ ಚಾನ್ಸ್ ಇಲ್ಲ.
ಯಾವ ಚಿಕನ್ ಡಿಶ್ ಹೆಲ್ತಿ?
ಚಿಕನ್ ಸ್ಟ್ರಿಪ್ಸ್
ಚಿಕನ್ ಬ್ರೆಸ್ಟ್‌ನ್ನು ಸಣ್ಣಗೆ ಕಟ್ ಮಾಡಿ ಒಂದು ಸ್ಪೂನ್ ಎಣ್ಣೆ ಜೊತೆ ಪ್ಯಾನ್ ಫ್ರೈ ಅಥವಾ ಏರ್‌ಫ್ರೈಯರ್‌ನಲ್ಲಿ ತಿನ್ನಿ

ಚಿಕನ್ ಸೂಪ್
ಚಿಕನ್‌ನ್ನು ನೀರಲ್ಲಿ ಬೇಯಿಸಿ ಸೂಪ್ ರೀತಿಯಲ್ಲಿ ಕುಡಿಯಿರಿ. ನೀರಲ್ಲಿ ಬೇಯಿಸಿದ ಚಿಕನ್ ಟೇಸ್ಟಿ

ಸ್ಟೀಮ್ಡ್ ಚಿಕನ್
ಚಿಕನ್‌ನ್ನು ಕತ್ತರಿಸಿ ಇಡ್ಲಿ ಪಾತ್ರೆಯಲ್ಲಿ ಸ್ಟೀಮ್ ಮಾಡಿ ಅದಕ್ಕೆ ತರಕಾರಿ ಹಾಗೂ ಮೊಟ್ಟೆ ಹಾಕಿಕೊಂಡು ತಿನ್ನಿ ಅದು ಕೂಡ ಆರೋಗ್ಯಕ್ಕೆ ಉತ್ತಮ

ಗ್ರಿಲ್ಡ್ ಚಿಕನ್
ಮೊಸರು, ಶುಂಠಿ, ಬೆಳ್ಳುಳ್ಳಿಯಲ್ಲಿ ಮ್ಯಾರಿನೇಟ್ ಮಾಡಿದ ಚಿಕನ್‌ನ್ನು ಗ್ರಿಲ್‌ನಲ್ಲಿ ಇಟ್ಟು ತಿಂದರೆ ರುಚಿಯೂ ಅದ್ಭುತ ಆರೋಗ್ಯಕ್ಕೂ ಉತ್ತಮ. ಆದರೆ ಚಿಕನ್ ಅತಿಯಾಗಿ ಸೀದುಹೋಗದಂತೆ ನೋಡಿಕೊಳ್ಳಿ.




