ಆಹಾರದಲ್ಲಿ ಮೊಟ್ಟೆಯ ಸ್ಥಾನವನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಆದರೆ ಬಾತುಕೋಳಿ ಮೊಟ್ಟೆ ಮತ್ತು ಕೋಳಿ ಮೊಟ್ಟೆಯ ನಡುವೆ ಯಾವುದು ಆರೋಗ್ಯಕ್ಕೆ ಹೆಚ್ಚು ಲಾಭಕರ? ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಇದ್ದೆ ಇರುತ್ತದೆ. ಪೋಷಕಾಂಶ, ರುಚಿ, ಗಾತ್ರ ಮತ್ತು ದೇಹಕ್ಕೆ ಬೀರುವ ಪರಿಣಾಮಗಳಲ್ಲಿ ಎರಡರಲ್ಲೂ ಸೂಕ್ಷ್ಮ ವ್ಯತ್ಯಾಸಗಳಿವೆ.
ಬಾತುಕೋಳಿ ಮೊಟ್ಟೆ ಗಾತ್ರದಲ್ಲಿ ದೊಡ್ಡದು ಮತ್ತು ಅದರ ಹಳದಿ ಭಾಗ (Yolk) ಹೆಚ್ಚು ದಟ್ಟವಾಗಿದೆ. ಇದರಿಂದಾಗಿ ಪ್ರೋಟೀನ್, ಒಮೇಗಾ–3 ಫ್ಯಾಟಿ ಆಸಿಡ್, ಐರನ್ ಮತ್ತು ವಿಟಮಿನ್ B12 ಕೋಳಿ ಮೊಟ್ಟೆಗಿಂತ ಹೆಚ್ಚಾಗಿರುತ್ತದೆ. ದೀರ್ಘಕಾಲ ಶಕ್ತಿ ಬೇಕಾದವರು, ಜಿಮ್ ಮಾಡುವವರು, ಹಾಗೂ ಗರ್ಭಿಣಿಯರಿಗೆ (ವೈದ್ಯರ ಅನುಮತಿಯ ಮೇರೆಗೆ) ಇದರಿಂದ ಹೆಚ್ಚಿನ ಪೋಷಕಾಂಶ ಸಿಗಬಹುದು.
ಕೋಳಿ ಮೊಟ್ಟೆ ಸಾಮಾನ್ಯವಾಗಿ ತುಸು ಹಗುರ, ಜೀರ್ಣವಾಗಲು ಸುಲಭ ಹಾಗೂ ದೈನಂದಿನ ಆಹಾರಕ್ಕೆ ಸೂಕ್ತ. ಕೊಲೆಸ್ಟ್ರಾಲ್ ಮಟ್ಟ ನೋಡಿಕೊಳ್ಳುವವರಿಗೆ ಕೋಳಿ ಮೊಟ್ಟೆಯೇ ಹೆಚ್ಚು ಸೇಫ್. ಬಾತುಕೋಳಿ ಮೊಟ್ಟೆಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಪ್ರಮಾಣ ಸ್ವಲ್ಪ ಹೆಚ್ಚಾಗಿರುವುದರಿಂದ heart-related issue ಇರುವವರು ಜಾಸ್ತಿ ಸೇವಿಸಬಾರದು.
ಬಾತುಕೋಳಿ ಮೊಟ್ಟೆಯ ಚಿಪ್ಪು ಕಠಿಣವಾಗಿರುವುದರಿಂದ ಅದರೊಳಗಿನ ಮೊಟ್ಟೆ ಹೆಚ್ಚು ಕಾಲ ತಾಜಾ ಇರುತ್ತದೆ. Baking (ಕೇಕ್, ಪೇಸ್ಟ್ರಿ) ಮಾಡುವವರು ಬಾತುಕೋಳಿ ಮೊಟ್ಟೆಯನ್ನು ಹೆಚ್ಚು ಬಳಸುತ್ತಾರೆ, ಏಕೆಂದರೆ ಅದು ಕೇಕ್‌ನ್ನು ಮೃದು ಹಾಗೂ ರುಚಿ ಹೆಚ್ಚು ಮಾಡುತ್ತದೆ.
ಯಾವುದು ಉತ್ತಮ?
ಸಾಮಾನ್ಯ ಆರೋಗ್ಯ, ಜೀರ್ಣ ಕ್ರಿಯೆ ಹಾಗೂ ನಿಯಮಿತ ಸೇವನೆಗಾಗಿ ಕೋಳಿ ಮೊಟ್ಟೆ ಉತ್ತಮ. ಕಡಿಮೆ ಪ್ರಮಾಣದಲ್ಲಿ ಪೋಷಕಾಂಶ ಹೆಚ್ಚಾಗಿ ಬೇಕಾದವರಿಗೆ ಬಾತುಕೋಳಿ ಮೊಟ್ಟೆ ಲಾಭಕಾರಿ. ಜೊತೆಗೆ ಇದು ವ್ಯಕ್ತಿಯ ಆರೋಗ್ಯ ಸ್ಥಿತಿ ಮತ್ತು ದಿನಚರಿಯ ಅವಶ್ಯಕತೆಯ ಮೇಲೆ ಅವಲಂಬಿತವಾಗಿದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

