October 11, 2026
Sunday, October 11, 2026
spot_img

ಈ ಕಳ್ಳರಿಗೆ ಅದೆಷ್ಟು ಧೈರ್ಯ ಇರಬೇಕು? ಪೊಲೀಸರ ಮನೆಗೇ ನುಗ್ಗಿ ಕಳ್ಳತನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳ್ಳರ ಗ್ಯಾಂಗ್‌ ಒಂದು ಸ್ವಲ್ಪವೂ ಭಯವಿಲ್ಲದೇ ಪೊಲೀಸರ ಮನೆಗೆ ಕನ್ನ ಹಾಕಿದೆ.

ಚಿನ್ನದ ಬೆಲೆ ಗಗನಕ್ಕೇರಿದ್ದು, ಬೆಂಗಳೂರು ನಗರದ ಜಾಲಹಳ್ಳಿ ಹೆಚ್‌ಎಟಿ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ಶ್ರೀಧರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ.

ಶ್ರೀಧರ್ ಎಂಬುವವರು ಕಾನ್‌ಸ್ಟೇಬಲ್ ಆಗಿದ್ದು, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಶ್ರೀಧರ್ ಅವರ ಪತ್ನಿಯ ಕುಟುಂಬಸ್ಥರು ಮುರುಗೇಶ್ ಪಾಳ್ಯದಲ್ಲಿ ವಾಸವಾಗಿದ್ದರು. ಈ ಹಿನ್ನೆಲೆ ಶ್ರೀಧರ್ ಹಾಗೂ ಅವರ ಪತ್ನಿ ಅಲ್ಲಿಗೆ ತೆರಳಿದ್ದರು. ಈ ವೇಳೆ ಜಾಲಹಳ್ಳಿಯಲ್ಲಿರುವ ಕ್ವಾಟರ್ಸ್ನಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿದ್ದ ಅಷ್ಟೂ ಚಿನ್ನ ಕಳುವಾಗಿದ್ದು, ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read