ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ, ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್‌ಗೆ ನರಕದ ‘ದರ್ಶನ’ವಾಗುತ್ತಿದೆ.
ನಿತ್ಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ಇರಿಸಿಕೊಮಡು ಫಿಟ್ನೆಸ್ ಮೆಂಟೈನ್ ಮಾಡುತ್ತಾ ಚಿಕನ್, ಮಟನ್, ಹಣ್ಣುಹಂಪಲು, ಜ್ಯೂಸ್ ಸೇವಿಸುತ್ತಿದ್ದ ‘ದಾಸ’ ಈಗ ಜೈಲಿನ ‘ಸ್ಪೆಷಲ್’ ಸಾಂಬಾರ್, ಮುದ್ದೆ, ಅನ್ನ ತಿನ್ನಲು ಕಷ್ಟಪಡುತ್ತಿದ್ದಾರೆ ಎನ್ನುತ್ತಿದೆ ಮೂಲಗಳ ಮಾಹಿತಿ.
ಭಾನುವಾರ ರಾತ್ರಿ ಜೈಲು ಮೆನು ಪ್ರಕಾರ ಮುದ್ದೆ, ಅನ್ನ, ಚಪಾತಿ ಹಾಗೂ ತರಕಾರಿ ಸಾಂಬಾರ್, ಮಜ್ಜಿಗೆ ಇತ್ತು. ಇದನ್ನು ತಿನ್ನಲಾಗದೆ ಯಜಮಾನ ಪರದಾಟ ಅನುಭವಿಸಿದ್ದಾರೆ.