Monday, October 13, 2025

ಮತ್ತೆ ಕಾಂಗ್ರೆಸ್ ಗೆ ಮುಜುಗರ ತಂದಿಟ್ಟ ಚಿದಂಬರಂ: ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ತಪ್ಪು ನಿರ್ಧಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಈ ಬಾರಿ ಇಂದಿರಾ ಗಾಂಧಿ ತೆಗೆದುಕೊಂಡ ಆಪರೇಶನ್ ಬ್ಲೂ ಸ್ಟಾರ್ ನಿರ್ಧಾರ ತಪ್ಪು ಎಂದಿದ್ದಾರೆ. ಚಿದಂಬರಂ ಮಾತಿಗೆ ಹಲವು ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಅಮೃತರಸರದ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಉಗ್ರ ಸಂಘಟನೆ ಹುಟ್ಟಿಗೆ ಕಾರಣವಾಗಿರುವ ಜರ್ನೈಲ್ ಸಿಂಗ್ ಬಿಂದ್ರನವಾಲೆ ಸೇರಿದಂತೆ ಹಲವು ಉಗ್ರರು ಸ್ವರ್ಣಮಂದಿರವನ್ನು ವಶಕ್ಕೆ ಪಡೆದು ಭಾರಿ ದಾಳಿಗೆ ಮುಂದಾಗಿತ್ತು. ಈ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸಿತ್ತು. ಈ ಮೂಲಕ ಉಗ್ರರ ಸದೆಬಡಿದು ಆಪರೇಶನ್ ಬ್ಲೂ ಸ್ಟಾರ್ ಮಂದಿರವನ್ನು ಕೈವಶ ಮಾಡಲಾಗಿತ್ತು. ಆದರೆ ಈ ನಿರ್ಧಾರ ತಪ್ಪು. ಇದರಿಂದ ಇಂದಿರಾ ಗಾಂಧಿ ಪ್ರಾಣ ತೆರಬೇಕಾಯಿತು. ಸಿಖ್ ಸಮುದಾಯದ ಆಕ್ರೋಶಕ್ಕೆ ಇಂದಿರಾ ಗಾಂಧಿ ಮೇಲೆ ದಾಳಿ ನಡೆಯಿತು ಎಂದು ಚಿದಂಬಂರಂ ಹೇಳಿದ್ದಾರೆ.

ಗೋಲ್ಡನ್ ಟೆಂಪಲ್‌ನಲ್ಲಿ ಆಶ್ರಯ ಪಡೆದಿದ್ದ ಉಗ್ರರ ಸದೆಬಡಿಯಲು ಸೇನೆ ನಡೆಸಿದ ಆಪರೇಶನ್ ಬ್ಲೂಸ್ಟಾರ್ ತಪ್ಪು ದಾರಿಯಾಗಿತ್ತು ಎಂದು ಚಿದಂಬರಂ ಹೇಳಿದ್ದಾರೆ. ಈ ತಪ್ಪು ನಿರ್ಧಾರಕ್ಕೆ ಇಂದಿರಾ ಗಾಂಧಿಯನ್ನು ಮಾತ್ರ ಗುರಿಯಾಗಿಸುವುದು ಸರಿಯಲ್ಲ. ಇಲ್ಲಿ ಭಾರತೀಯ ಸೇನೆ, ಗುಪ್ರಚರ ಇಲಾಖೆ, ಪೊಲೀಸರು ಜಂಟಿಯಾಗಿ ತೆಗೆದುಕೊಂಡು ನಿರ್ಧಾರ ಎಂದಿದ್ದಾರೆ.

ಪಿ ಚಿದಂಬರಂ ಹೇಳಿಕೆಗೆ ಕಾಂಗ್ರೆಸ್ ಗೆ ಮುಜುಗರ ತಂದಿದ್ದು, ಚಿದಂಬರಂ ಹದ್ದು ಮೀರಿ ಮಾತನಾಡುತ್ತಿದ್ದಾರೆ. ಹಿರಿಯ ನಾಯಕರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹಲವು ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ.

ಸತ್ಯ ಮಾತನಾಡುತ್ತಿದ್ದಾರೆ ಎಂದ ಬಿಜೆಪಿ
ಪಿ ಚಿದಂಬರಂ ಇತ್ತೀಚೆಗೆ ಸತ್ಯ ಮಾತನಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ಚಿದಂಬರಂ ವಿರುದ್ದ ಕ್ರಮ ಕೈಗೊಳ್ಳುತ್ತಾ? ಇಷ್ಟು ದಿನ ಪ್ರಚಾರದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕುರಿತು ತಪ್ಪು ಪ್ರಚಾರ ಮಾಡುತ್ತಿದ್ದ ಅಜೆಂಡಾವನ್ನು ಚಿದಂಬರಂ ಬಯಲು ಮಾಡಿದ್ದಾರೆ. ಚಿದಂಬರಂ ವಿರುದ್ದ ಕ್ರಮ ಯಾವಾಗಾ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.

error: Content is protected !!