ಹೊಸದಿಗಂತ ವರದಿ,ಕಲಬುರಗಿ:
ಕಲ್ಯಾಣ ಕನಾ೯ಟಕ ರಸ್ತೆ ಸಾರಿಗೆ ಸಂಸ್ಥೆಯು 1800.35 ಲಕ್ಷ ರೂ. ಮೊತ್ತದಲ್ಲಿ ಖರೀದಿಸಲಾದ ಅಮೋಘವರ್ಷ ಬ್ರ್ಯಾಂಡಿನ 36 (ನಾನ್ ಎ.ಸಿ) ಸ್ಲೀಪರ್ ಹಾಗೂ 4 ಎ.ಸಿ. ಸ್ಲೀಪರ್ ಬಸ್‍ಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಸಿರು ನಿಶಾನೆ ತೋರುವ ಮೂಲಕ ಬಸ್,ಗಳನ್ನು ಲೋಕಾಪ೯ಣೆ ಮಾಡಿದರು.
30 ಆಸನಗಳ ಸಾಮಥ್ರ್ಯ ಹೊಂದಿರುವ ಈ ಬಸ್ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣ, ಪ್ರತಿ ಸೀಟಿಗೆ ಕಿರು ಲಗೇಜ್, ಮೋಬೈಲ್-ಲ್ಯಾಪಟಾಪ್ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ವ್ಯವಸ್ಥೆ, ಏರ್ ಸಸ್ಪೆನ್ಸನ್ ಸಿಸ್ಟಮ್, ಪಬ್ಲಿಕ್ ಇನ್‍ಫಾರ್ಮೇಷನ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಸೌಲಭ್ಯ ಒಳಗೊಂಡಿದೆ. ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ “ಕವಿರಾಜ ಮಾರ್ಗ” ಕೃತಿ ರಚಿಸಿದ ಕವಿ ಅಮೋಘವರ್ಷ ಹೆಸರಿನ ಈ ಬಸ್ಸುಗಳು ನಾಡಿನುದ್ದಕ್ಕೂ ಸಂಚರಿಸುತ್ತಾ, ಕರುನಾಡಿನ ಜನರಿಗೆ ರಾಷ್ಟ್ರಕೂಟರ ಇತಿಹಾಸ ಸಾರುವುದರಲ್ಲಿ ಸಂದೇಹವಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖಗೆ೯,ಕೆಕೆಆರಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ್, ಖನೀಜ್ ಫಾತೀಮಾ,ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪಾ ಕಮಕನೂರ್, ಕೆಕೆಆರಟಿಸಿ ಎಂಡಿ ರಾಚಪ್ಪಾ ಜೊತೆಗಿದ್ದರು.