ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲಾ ಧರ್ಮದವರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ನೀಡಿ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಹೆಗಡೆ ನಗರದ ಹಜ್ ಭವನದಲ್ಲಿ ಹಜ್ ಯಾತ್ರಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
10,168 ಹಜ್ ಯಾತ್ರಿಕರಿಗೆ ಆಹ್ಲಾದಕರ ಪ್ರಯಾಣವನ್ನು ನಾನು ಬಯಸುತ್ತೇನೆ. ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆಗಾಗಿ ನಾವು ಪ್ರಾರ್ಥಿಸಬೇಕು. ಕುವೆಂಪು ಅವರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿರುವುದರಿಂದ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್ಖರು ಒಂದೇ ತಾಯಿಯ ಮಕ್ಕಳಾಗಬೇಕು. ಇಂತಹ ವಾತಾವರಣ ನಿರ್ಮಾಣವಾಗಲು ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಎಲ್ಲರಿಗೂ ಸದುಪಯೋಗವಾಗಬೇಕು ಹಾಗೂ ಎಲ್ಲರೂ ಸಬಲರಾಗಬೇಕು ಎಂದರು.