ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಸಮಾಜಗಳು ಮದುವೆಯ ವಯಸ್ಸು ಮತ್ತು ಮದುವೆಯ ಸಂದರ್ಭವನ್ನು ನಿರ್ಧರಿಸುವ ಸಂಪ್ರದಾಯವನ್ನು ಅನುಸರಿಸುತ್ತವೆ. ಆದರೆ ಇಲ್ಲಿ ಮಗನ ಹಠಮಾರಿತನಕ್ಕೆ ಪೋಷಕರು ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ.
ಕೇವಲ 13 ವರ್ಷ ವಯಸ್ಸಿನ ಮಕ್ಕಳಿಗೆ ಕಾನೂನುಬದ್ಧ ವಿವಾಹ ಮಾಡಲಾಗಿದೆ, ಹೌದು, ಪಾಕಿಸ್ತಾನದಲ್ಲಿ ಇಂತಹ ಮದುವೆ ನಡೆದಿವೆ. ಇಬ್ಬರು ಮಕ್ಕಳು ವಧು ಮತ್ತು ವರರಂತೆ ಮದುವೆಯಾಗಿದ್ದಾರೆ. ಮದುವೆಯ ಆರತಕ್ಷತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನದಲ್ಲಿ ನಡೆದ ಈ ಮದುವೆಯ ವಿಡಿಯೋವನ್ನು ಸಲಾಮ್ ಪಾಕಿಸ್ತಾನ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 13 ವರ್ಷದ ಬಾಲಕ ವರನಾಗಿ ಹಾಗೂ ಕೇವಲ 12 ವರ್ಷದ ವಧುವಿಗೆ ಮದುವೆ ಮಾಡಿದ್ದಾರೆ.
View this post on Instagram
ಮಗ ತನ್ನ ಪೋಷಕರಲ್ಲಿ ಮದುವೆ ಮಾಡುವಂತೆ ಒತ್ತಾಯಿಸಲಾಗಿದೆ ಎನ್ನಲಾಗಿದೆ. ಮದುವೆ ಆಗುವವರೆಗೂ ಶಾಲೆಗೆ ಹೋಗುವುದಿಲ್ಲ ಎಂದು ಮಗ ಹಠ ಮಾಡಿದ್ದನಂತೆ. ಕೊನೆಗೆ ಪಾಲಕರು ತಮ್ಮ ಮಗುವಿನ ಹಠಕ್ಕೆ ಮಣಿದು ಇಬ್ಬರಿಗೂ ಮದುವೆ ಮಾಡಿದ್ದಾರೆ.