ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಆಯುರ್ವೇದಿಕ್ ಕೆಮ್ಮಿನ ಸಿರಪ್ ಮತ್ತು ಔಷಧೀಯ ಪುಡಿ ಸೇವಿಸಿದ ನಂತರ ಐದು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿದೆ ಆಘಾತಕಾರಿ ಘಟನೆ ಶುಕ್ರವಾರ ವರದಿಯಾಗಿದೆ.
ಕೆಲವು ದಿನಗಳ ಹಿಂದೆ ಛಿಂದ್ವಾರಾದ 21, ಬೇತುಲ್‌ನ ಇಬ್ಬರು ಮತ್ತು ಪಂಧುರ್ನಾದ ಒಬ್ಬ ಮಗು ಸೇರಿದಂತೆ 24 ಮಕ್ಕಳು ಅಲೋಪತಿ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ ಸೇವನೆಯಿಂದ ಮೃತಪಟ್ಟಿದ್ದರು.
ಇದೀಗ ಆಯುರ್ವೇದಿಕ್ ಕೆಮ್ಮಿನ ಸಿರಪ್ ಸೇವಿಸಿ ಐದು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಇದರೊಂದಿಗೆ ಸಿರಪ್ ಸೇವನೆಯಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 25ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ರುಹಿ ಮಿನೋಟೆ ಎಂಬ ಮಗು ಮೃತಪಟ್ಟಿದೆ. ಅವರ ಕುಟುಂಬವು ನಾಲ್ಕು ದಿನಗಳ ಹಿಂದೆ ಕುರತಾ ಮೆಡಿಕಲ್ ಶಾಪ್‌ನಿಂದ ಆಯುರ್ವೇದಿಕ್ ಸಿರಪ್ ಮತ್ತು ಕೆಲವು ಔಷಧೀಯ ಪುಡಿಯನ್ನು ಖರೀದಿಸಿತ್ತು. ಮೆಡಿಕಲ್ ಶಾಪ್ ಅನ್ನು ಸೀಲ್ ಮಾಡಲಾಗಿದೆ’ ಎಂದು ಚೌರೈ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಪ್ರಭಾತ್ ಮಿಶ್ರಾ ತಿಳಿಸಿದ್ದಾರೆ.

