ಮಕ್ಕಳ ಕಳ್ಳರ ಆತಂಕ ಇಲ್ಲ ; ಸಂದೇಹ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ: ಎಸ್.ಪಿ.ಶಿವಪ್ರಕಾಶ ದೇವರಾಜ

ಹೊಸ ದಿಗಂತ ವರದಿ, ಗದಗ :

ಇತ್ತೀಚಿಗೆ ಮಕ್ಕಳ ಕಳ್ಳತನಗಳ ಬಗ್ಗೆ ಮೂಬೈಲ್ ವ್ಯಾಟ್ಸಪ್‌ನಲ್ಲಿ ಸಾಕಷ್ಟು ವಿಡಿಯೋಗಳ ಹರಿದಾಡುತ್ತಿದ್ದು ಅಂತಹ ಯಾವ ಘಟನೆಗಳು ಜಿಲ್ಲೆಯಲ್ಲಿ ನಡೆದಿರುವದಿಲ್ಲ ಈ ಬಗ್ಗೆ ಪಾಲಕರು ಆತಂಕ ಪಡುವ ಅಗತ್ಯವಿಲ್ಲ ಮತ್ತು ಸಾರ್ವಜನಿಕರು ಇಂತಹ ಯಾವುದೇ ವಿಡಿಯೋಗಳನ್ನು ಇತರರಿಗೆ ಕಳುಹಿಸಬಾರದು ಎಂದು ಎಸ್‌ಪಿ ಶಿವಪ್ರಕಾಶ ದೇವರಾಜ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಮಕ್ಕಳ ಕಳ್ಳರ ವೀಡಿಯೋ ಎಂದು ಬಿಂಬಿಸುವ ವೀಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇದರಿಂದಾಗಿ ಸಂದೇಹದ ಹಿನ್ನೆಲೆಯಲ್ಲಿ ಜನರನ್ನು ಹಿಡಿದು ಥಳಿಸುವ ಪ್ರಕರಣ ಬೆಳಕಿಗೆ ಬಂದಿವೆ. ಆದರೆ, ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಪ್ರಕರಣಗಳು ದಾಖಲಾಗಿಲ್ಲ. ಸಂದೇಹ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಆದರೆ ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ತಾಲೂಕಿನ ಲಕ್ಕುಂಡಿಯಲ್ಲಿ ಮಂಗಳವಾರ ಮಕ್ಕಳ ಕಳ್ಳ ಎಂದು ಓರ್ವ ವ್ಯಕ್ತಿಯನ್ನು ಸ್ಥಳೀಯರು ಹಿಡಿದಿದ್ದರು. ಆದರೆ, ಕೊಲ್ಕತ್ತಾ ಮೂಲದ ಆ ವ್ಯಕ್ತಿ ಮಕ್ಕಳಿಗೆ ಚಾಕಲೇಟ್ ಕೊಡಿಸಿದ್ದ ಎಂಬ ಕಾರಣಕ್ಕೆ ಸ್ಥಳೀಯರು ಅವನನ್ನು ಹಿಡಿದು ಥಳಿಸಿದ್ದರು. ವಿಚಾರಣೆ ನಡೆಸಿದಾಗ ಆತ ಮಕ್ಕಳ ಕಳ್ಳ ಅಲ್ಲ ಎನ್ನುವುದು ಗೊತ್ತಾಗಿದೆ. ಪಿಕ್‌ಪ್ಯಾಕೆಟ್ ಕಳ್ಳತನ ಮಾಡುವವನ ಮೇಲೆ ಅನುಮಾನ ಇದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಅನುಮಾನ ಮೂಡಿಸುವ ವ್ಯಕ್ತಿಗಳು ಕಂಡುಬಂದರೆ ಹಲ್ಲೆ ಮಾಡುವ ಬದಲು ಪೊಲೀಸರಿಗೆ ಮಾಹಿತಿ ನೀಡಿ. ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಲಿದ್ದಾರೆ ಎಂದು ಎಸ್.ಪಿ. ಶಿವಪ್ರಕಾಶ ದೇವರಾಜು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!