ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್, ಕೇರಳದ ಸೌಂದರ್ಯ ಆನಂದಿಸಲು ನಿಮಗಾಗಿ ಅದ್ಭುತವಾದ ಪ್ಯಾಕೇಜ್ ಘೋಷಣೆ ಮಾಡಿದೆ. ಟೂರ್ ಪ್ಯಾಕೇಜ್ ಎಷ್ಟು ದಿನಗಳನ್ನು ಒಳಗೊಂಡಿದೆ.
ಐಆರ್ಸಿಟಿಸಿ ‘Munnar Thekkady Rail Tour Package Ex Bangaluru’ ಎಂಬ ಪ್ರವಾಸದ ಪ್ಯಾಕೇಜ್ ತಂದಿದೆ. ಈ ಪ್ಯಾಕೇಜ್ ಒಟ್ಟು ಆರು ದಿನಗಳವರೆಗೆ ಸೇರಿರುತ್ತದೆ. ಈ ಪ್ರವಾಸದಲ್ಲಿ ನೀವು ಮುನ್ನಾರ್ ಹಾಗೂ ಅಲೆಪ್ಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಬೆಂಗಳೂರಿನಿಂದ ಟ್ರಿಪ್ ಆರಂಭವಾಗುತ್ತದೆ.
1ನೇ ದಿನ: ಮೊದಲ ದಿನ, ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ರಾತ್ರಿ 20:10ಕ್ಕೆ ರೈಲು (ಸಂಖ್ಯೆ 16526) ಹೊರಡಲಿದೆ. ಇಡೀ ರಾತ್ರಿ ಪ್ರಯಾಣ ಸಾಗಲಿದೆ.
2ನೇ ದಿನ: ಎರಡನೇ ದಿನ ಎರ್ನಾಕುಲಂ ಟೌನ್ ರೈಲು ನಿಲ್ದಾಣಕ್ಕೆ 7:20 ಗಂಟೆಗೆ ಬಂದು ತಲುಪಲಿದೆ. ಈ ರಸ್ತೆಯ ಮಾರ್ಗವಾಗಿ ಮುನ್ನಾರ್‌ಗೆ ತೆರಳಲಾಗುವುದು. ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ತೆರಳಿ ಚೆಕ್ ಇನ್ ಮಾಡಲಾಗುವುದು. ಫ್ರೆಶ್ ಅಪ್ ಆದ ನಂತರ ಸಂಜೆ ಟೀ ಮ್ಯೂಸಿಯಂಗೆ ಭೇಟಿ ನೀಡಲಾಗುವುದು. ಮುನ್ನಾರ್‌ನಲ್ಲಿ ರಾತ್ರಿ ವಾಸ್ತವ್ಯ ಇರಲಿದೆ.
3ನೇ ದಿನ: ಮೂರನೇ ದಿನ ಬೆಳಗಿನ ಉಪಹಾರ ಹಾಗೂ ಬೆಳಗಿನ ಭೇಟಿ ಎರವಿಕುಲಂ ರಾಷ್ಟ್ರೀಯ ಉದ್ಯಾನ (ಅಥವಾ) ಟಾಪ್ ಸ್ಟೇಷನ್ ವ್ಯೂ ಪಾಯಿಂಟ್‌ಗೆ ಮಧ್ಯಾಹ್ನ ಭೇಟಿ ನೀಡಲಾಗುವುದು. ಬಳಿಕ ಮೆಟ್ಟುಪೆಟ್ಟಿ ಅಣೆಕಟ್ಟು ಮತ್ತು ಎಕೋ ಪಾಯಿಂಟ್, ಕುಂಡ್ಲಾ ಸರೋವರ ತೆರಳಾಗುವುದು. ಶಾಪಿಂಗ್‌ಗಾಗಿ ಮುನ್ನಾರ್ ಪಟ್ಟಣಕ್ಕೆ ಸಂಜೆ ತೆರಳಲಾಗುವುದು. ಮುನ್ನಾರ್‌ನಲ್ಲಿ ರಾತ್ರಿ ಉಳಿಯುವ ವ್ಯವಸ್ಥೆ ಇರಲಿದೆ.
4ನೇ ದಿನ: ನಾಲ್ಕನೇ ದಿನ ಉಪಾಹಾರದ ನಂತರ ಚೆಕ್ ಔಟ್ ಮಾಡುವ ಮೂಲಕ ತೆಕ್ಕಾಡಿಗೆ ವರ್ಗಾಯಿಸಲಾಗುವುದು. ಮಸಾಲೆ ಪದಾರ್ಥಗಳ ಖರೀದಿಗಾಗಿ ಮಾರ್ಗದಲ್ಲಿ ಶಾಪಿಂಗ್ ಮಾಡಬಹುದು. ಸಂಜೆ ವಿರಾಮ ಇರುತ್ತದೆ. ತೆಕ್ಕಡಿಯಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
5ನೇ ದಿನ:ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ಸರೋವರದಲ್ಲಿ ಬೆಳಗ್ಗೆ ದೋಣಿ ವಿಹಾರ ಆನಂದಿಸಲಾಗುವುದು. ಹೋಟೆಲ್‌ಗೆ ಹಿಂತಿರುಗಲಾಗುವುದು. ಉಪಹಾರದ ಬಳಿಕ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಹಾಗೂ ಎರ್ನಾಕುಲಂ ಟೌನ್ ರೈಲ್ವೆ ನಿಲ್ದಾಣಕ್ಕೆ ಬಂದು 5:55ಕ್ಕೆ ಹೊರಡುವ ರೈಲು ಹತ್ತಬೇಕು.
ದರ ಹೀಗಿದೆ..
ಕಂಫರ್ಟ್‌ನಲ್ಲಿ ಸಿಂಗಲ್ ಶೇರಿಂಗ್- ₹30,840
ಡಬಲ್ ಶೇರಿಂಗ್- ₹17,420,
ಟ್ರಿಪಲ್ ಹಂಚಿಕೆ – ₹14,5005 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಸಹಿತ ₹12,250 ಮತ್ತು ಹಾಸಿಗೆ ರಹಿತ ₹ 9,670
ಸ್ಟ್ಯಾಂಡರ್ಡ್‌ನಲ್ಲಿ ಸಿಂಗಲ್ ಶೇರಿಂಗ್ -₹ 28,640
ಡಬಲ್ ಶೇರಿಂಗ್ – ₹ 15,220
ಟ್ರಿಪಲ್ ಹಂಚಿಕೆ ₹12,300
5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ, ಹಾಸಿಗೆ ಸಹಿತ ₹10,040 ಹಾಗೂ ಹಾಸಿಗೆ ರಹಿತ ₹7,470 ದರವಿದೆ.
ಪ್ಯಾಕೇಜ್ನಲ್ಲಿಏನೇನಿದೆ?
ರೈಲು ಟಿಕೆಟ್‌ಗಳು (ಬೆಂಗಳೂರು – ಎರ್ನಾಕುಲಂ – ಬೆಂಗಳೂರು)
ಪ್ಯಾಕೇಜ್‌ಗೆ ಅನುಗುಣವಾಗಿ, ಸ್ಥಳೀಯ ಸಾರಿಗೆಗಾಗಿ ವಾಹನವನ್ನು ವ್ಯವಸ್ಥೆ ಮಾಡಲಾಗುತ್ತದೆ.
ಉಪಾಹಾರ ಸೇರಿದಂತೆ 3 ದಿನಗಳ ಹೋಟೆಲ್ ವಾಸ್ತವ್ಯವಿರುತ್ತದೆ.
ಪ್ರಯಾಣ ವಿಮೆ ಲಭ್ಯವಿದೆ.
ಈ ಪ್ಯಾಕೇಜ್ ಪ್ರಸ್ತುತ ಬುಕ್ಕಿಂಗ್ ಮಾರ್ಚ್ 17 ರಿಂದ ಆರಂಭವಾಗಲಿದೆ.