ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮಲ್ಲಿ ಎಳೆ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗೋದಕ್ಕೆ ಭಯ ಬೀಳ್ತಾರೆ, ಬಿಸಿಲು ಇದೆ, ಜನ ನೋಡಿದ್ರೆ ದೃಷ್ಟಿ ಆಗತ್ತೆ ಅಂತ ಮನೆಯೊಳಗೆ ಬೆಚ್ಚಗೆ ತೊಟ್ಟಿಲಲ್ಲಿ ಮಲಗಿಸಿಬಿಡ್ತೀವಿ.
ಆದ್ರೆ ಡೆನ್ಮಾರ್ಕ್‌ನಲ್ಲಿ ಮಕ್ಕಳನ್ನು ಟ್ರಾಲಿ ಒಳಗೆ ಹಾಕಿ ಬಿಸಿಲಿನಲ್ಲಿ ಮಲಗೋಕೆ ಬಿಟ್ಟು ಬಿಡ್ತಾರೆ, ಬಿಡೋದು ಅಷ್ಟೇ ಅಲ್ಲ, ಮಕ್ಕಳನ್ನು ಮಲಗಿಸಿ ತಮ್ಮ ತಮ್ಮ ಕೆಲಸಗಳಿಗೆ ಹೋಗೋದು, ಶಾಪಿಂಗ್ ಮಾಡೋದು ಹೀಗೆ ಅವರ ಕೆಲಸ ಮಾಡಿಕೊಳ್ತಾರೆ. ಇಲ್ಲಿ ಮಕ್ಕಳ ಕಳ್ಳತನದ ಭಯವೇ ಇಲ್ಲ. ಇಡೀ ರಸ್ತೆಯಲ್ಲಿ ಎಲ್ಲೆಂದರಲ್ಲಿ ಟ್ರೊಲಿಯಲ್ಲಿ ಮಕ್ಕಳು ಕಾಣಿಸ್ತಾರೆ. ಇದು ತೀರಾ ಸಹಜ ದೃಶ್ಯವಾಗಿದೆ.
ನಿಸರ್ಗದ ಜೊತೆ ಮಕ್ಕಳು ಬೆರೆಯಬೇಕು, ಉತ್ತಮ ಆಮ್ಲಜನಕ ಪಡೆಯಬೇಕು, ಒಳ್ಳೆ ನಿದ್ದೆ ಮಾಡಬೇಕು ಎನ್ನೋದು ಪೋಷಕರ ಅಭಿಪ್ರಾಯ. ಎಲ್ಲಿ ಮಕ್ಕಳನ್ನು ಬಿಟ್ಟು ಹೋದರು ಯಾರಾದರೂ ಮಕ್ಕಳ ಮೇಲೆ ಕಣ್ಣಿಡುತ್ತಾರೆ, ಮಗು ಎದ್ದರೆ ಪೋಷಕರಿಗೆ ಕರೆ ಮಾಡ್ತಾರೆ. ಐಡಿಯಾ ಸಖತ್ತಾಗಿದೆ ಅಲ್ವಾ?
https://twitter.com/TansuYegen/status/1677326777717342208?s=20