16 ವರ್ಷದೊಳಗಿನ ಮಕ್ಕಳಿಗೆ ಇದನ್ನು ಮಾಡುವ ಅವಕಾಶ ಇಲ್ಲ, ಏನು ಹೇಳ್ತಿದೆ ಇನ್ಸ್ಟಾಗ್ರಾಮ್‌ ಟೀಂ??

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಹತ್ತನೇ ಕ್ಲಾಸ್‌ಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ಟಾಗ್ರಾಮ್‌ ಅವಶ್ಯಕತೆ ಏನಿದೆ? ಮಕ್ಕಳು ರೀಲ್ಸ್‌ ನೋಡಿ ಕಲಿಯುವಂಥದ್ದು ಏನಿದೆ ಎಂದು ಪೋಷಕರು ಗರಂ ಆಗ್ತಿದ್ದಾರೆ. ಆದರೆ ಮಕ್ಕಳು ವಯಸ್ಸನ್ನು ಸುಳ್ಳು ಹೇಳಿಯಾದ್ರೂ ಅಕೌಂಟ್‌ ಮಾಡಿಕೊಂಡು ಲೈವ್‌ ವಿಡಿಯೋಗಳನ್ನು ಮಾಡ್ತಾರೆ.

ಸದ್ಯ ಇನ್ಸ್ಟಾಗ್ರಾಮ್‌ ಇದಕ್ಕೆ ಕಡಿವಾಣ ಹಾಕಿದೆ. 16 ವರ್ಷ ದಾಟದ ಮಕ್ಕಳು ಲೈವ್‌ ಮಾಡುವಂತಿಲ್ಲ ಎಂದು ಟೀಂ ಹೇಳಿದೆ.

ಇನ್‌ಸ್ಟಾಗ್ರಾಮ್ ಮಾಡಿದ ಬದಲಾವಣೆಗಳ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಲು ಮೊದಲು ಪೋಷಕರ ಅನುಮತಿಯನ್ನು ಪಡೆಯಬೇಕು. ಅವರ ಅನುಮತಿಯಿಲ್ಲದೆ ಲೈವ್ ಆಯ್ಕೆಯನ್ನು ಬಳಸಲಾಗುವುದಿಲ್ಲ. ಪೋಷಕರ ಅನುಮತಿಯಿಲ್ಲದೆ 16 ವರ್ಷ ವಯಸ್ಸಿನವರಿಗೆ ನೇರ ಸಂದೇಶಗಳಲ್ಲಿ ನಗ್ನತೆಯನ್ನು ಹೊಂದಿರುವ ವಿಷಯವು ಗೋಚರಿಸುವುದಿಲ್ಲ. ಮೆಟಾ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಇದನ್ನು ಬಹಿರಂಗಪಡಿಸಿದೆ.

16 ವರ್ಷದೊಳಗಿನ ಹದಿಹರೆಯದವರು ತಮ್ಮ ಪೋಷಕರ ಅನುಮತಿ ನೀಡದ ಹೊರತು ಇನ್​ಸ್ಟಾ ಲೈವ್ ಅನ್ನು ಬಳಸುವಂತಿಲ್ಲ. ನೇರ ಸಂದೇಶಗಳಲ್ಲಿ, ನಗ್ನತೆಯಿರುವ ಚಿತ್ರಗಳನ್ನು ಮಸುಕುಗೊಳಿಸಲಾಗುತ್ತದೆ. ನೀವು ಅದನ್ನು ವೀಕ್ಷಿಸಲು ಪ್ರಯತ್ನಿಸಿದರೂ, ನಿಮಗೆ ಸಾಧ್ಯವಾಗುವುದಿಲ್ಲ. ಅದನ್ನು ಆಫ್ ಮಾಡಲು ಯಾವುದೇ ಆಯ್ಕೆಯಿಲ್ಲ, ಎಂದು ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ, ಇದಕ್ಕೆ ಪೋಷಕರ ಅನುಮತಿಯೂ ಬೇಕಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!