ಪ್ರತಿ ಬಾರಿ ದೀಪಾವಳಿಯ ನಂತರದ ದಿನ, ಮಕ್ಕಳ ಕಣ್ಣು ಹೋಯ್ತು, ಕೈಕಾಲಿಗೆ ಪೆಟ್ಟಾಯ್ತು ಇನ್ನೂ ಒಂದು ಹೆಜ್ಜೆ ಮುಂದೆ ಅಂದರೆ ಮಕ್ಕಳ ಪ್ರಾಣಕ್ಕೆ ತೊಂದರೆ ಎನ್ನುವಂಥ ಸುದ್ದಿಗಳನ್ನು ಕೇಳುತ್ತೇವೆ. ಈ ರೀತಿ ಆಗದೇ, ಸುಂದರ, ಆನಂದದ ದೀಪಾವಳಿ ಆಚರಿಸಿ. ಪಟಾಕಿ ಹೊಡೆಯುವಾಗ ಏನು ಮಾಡಬೇಕು, ಏನು ಮಾಡಬಾರದು ಲಿಸ್ಟ್ ಇಲ್ಲಿದೆ..
ಏನು ಮಾಡಬಾರದು?
ಲೈಸೆನ್ಸ್ ಇಲ್ಲದ ಪಟಾಕಿಗಳನ್ನು ತರುವುದು, ದುಡ್ಡು ಕಡಿಮೆ ಎಂದು ಲೈಸೆನ್ಸ್ ಇಲ್ಲದ ಪಟಾಕಿ ತರಬೇಡಿ, ಜೀವಕ್ಕೆ ಹಾನಿಯಾಗಬಹುದು.
ನೈಲಾನ್ ಬಟ್ಟೆ ಧರಿಸಿ ಪಟಾಕಿ ಹೊಡೆಯುವುದು
ಮಕ್ಕಳನ್ನು ಪಟಾಕಿ ಹೊಡೆಯಲು ಬಿಡುವುದು
ಏನಾದರೂ ಇಂಜುರಿ ಆದರೆ ಮನೆಯಲ್ಲೇ ಚಿಕಿತ್ಸೆ ನೀಡುವುದು
ಪಟಾಕಿ ಕೈಯಲ್ಲೇ ಇಟ್ಟುಕೊಂಡು ಹಚ್ಚಿ ಬಿಸಾಡುವುದು
ದೀಪ, ಊದಿನಬತ್ತಿ ಹತ್ತಿರವೇ ಪಟಾಕಿ ಇಟ್ಟುಕೊಳ್ಳುವುದು.
ಲೋಟ ಅಥವಾ ಬಾಟಲಿಯ ಒಳಗೆ ರಾಕೆಟ್ ಇಟ್ಟು ಹಾರಿಸುವುದು
ಪಟಾಕಿ ಹೊಡೆಯುವ ವೇಳೆ ರಸ್ತೆಯಲ್ಲಿ ಜನರು ಇರುವ ಅಥವಾ ಇಲ್ಲದಿರುವ ಬಗ್ಗೆ ಗಮನಹರಿಸದೇ ಇರುವುದು
ಏನು ಮಾಡಬೇಕು?
ಕಾಟನ್ ಬಟ್ಟೆ ಧರಿಸಬೇಕು
ಮಕ್ಕಳ ಜೊತೆಯಲ್ಲಿ ದೊಡ್ಡವರು ಇರಲೇಬೇಕು
ಲೈಸೆನ್ಸ್ ಡೀಲರ್ ಬಳಿ ಪಟಾಕಿ ಕೊಳ್ಳಿ
ಪಟಾಕಿ ಹೊಡೆಯುವ ಮುನ್ನ ಬಕೆಟ್‌ನಲ್ಲಿ ಮರಳು ತುಂಬಿ ಇಟ್ಟುಕೊಳ್ಳಿ, ಎಲ್ಲಿಗಾದರೂ ಬೆಂಕಿ ಬಿದ್ದರೆ ತಕ್ಷಣ ನಂದಿಸಿ
ಹೊಡೆದ ಪಟಾಕಿಗಳನ್ನು ನೀರಿಗೆ ಹಾಕಿ
ರಾಕೆಟ್‌ನಂಥ ಪಟಾಕಿಗಳನ್ನು ಅತಿ ಹತ್ತಿರ ನಿಂತು ಬಗ್ಗಿ ಹಚ್ಚಬೇಡಿ
ರಸ್ತೆ ಮಧ್ಯೆ ಪಟಾಕಿ ಹೊಡೆಯುತ್ತಿದ್ದರೆ ಓಡಾಡುವ ವಾಹನಗಳ ಬಗ್ಗೆ ಗಮನ ಇರಲಿ
ಪರಿಸರಕ್ಕೆ ಕಡಿಮೆ ಮಾಲಿನ್ಯ ತರುವ ಪಟಾಕಿಗಳನ್ನು ಬಳಸಿ