ಮಕ್ಕಳ ಬೆಳವಣಿಗೆಯಲ್ಲಿ ಆಹಾರವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ 0 ರಿಂದ 5 ವರ್ಷದ ವಯಸ್ಸಿನೊಳಗಿನ ಮಕ್ಕಳು ಬೆಳೆಯುವ ಹಂತದಲ್ಲಿರುವುದರಿಂದ, ಅವರಿಗೆ ನೀಡುವ ಆಹಾರ ಸರಿಯಾದ ಪೋಷಕಾಂಶಗಳನ್ನು ಹೊಂದಿರಬೇಕು. ಆದರೆ, ಈ ವಯಸ್ಸಿನ ಮಕ್ಕಳಿಗೆ ಕೆಲವು ಆಹಾರಗಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಪೋಷಕರು ಯಾವ ಆಹಾರಗಳನ್ನು ಮಕ್ಕಳಿಗೆ ಕೊಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ಕಾಫೀನ್ ಇರುವ ಪಾನೀಯಗಳು
ಕಾಫೀನ್ ಮಕ್ಕಳ ನರಮಂಡಲಕ್ಕೆ ಹಾನಿ ಮಾಡುವುದರ ಜೊತೆಗೆ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ. ಹೀಗಾಗಿ ಕಾಫೀನ್ ಇರುವ ಟೀ, ಕಾಫೀ, ಎನರ್ಜಿ ಡ್ರಿಂಕ್ಸ್ ಮಕ್ಕಳಿಗೆ ನೀಡಬಾರದು.

ಸಂಸ್ಕರಿಸದ ಮಾಂಸ
ಮಕ್ಕಳಿಗೆ ಸಂಸ್ಕರಿಸದ ಮಾಂಸಾಹಾರ ತುಂಬಾ ಅಪಾಯಕಾರಿ. ಇದರಲ್ಲಿ ಹೆಚ್ಚು ಸೋಡಿಯಂ ಮತ್ತು ಅನಾರೋಗ್ಯಕರ ಕೊಬ್ಬುಗಳಿರುವುದರಿಂದ ಹೃದಯ ಹಾಗೂ ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಸಕ್ಕರೆ ಪಾನೀಯಗಳು
ಸೋಡಾ, ಪ್ಯಾಕೇಜ್ ಮಾಡಿದ ಹಣ್ಣಿನ ಜ್ಯೂಸ್ ಹಾಗೂ ಇತರೆ ಶುಗರಿ ಡ್ರಿಂಕ್ಸ್ ತೂಕ ಹೆಚ್ಚಿಸುವುದರ ಜೊತೆಗೆ ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು.

ಆರ್ಟಿಫಿಷಲ್ ಸ್ವೀಟನರ್
ಕೃತಕ ಸಿಹಿ ಪದಾರ್ಥಗಳು ಮಕ್ಕಳ ಚಯಾಪಚಯ ಕ್ರಿಯೆಯನ್ನು ಹಾಳುಮಾಡುತ್ತವೆ. ಇವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಕರಿದ ಆಹಾರಗಳು
ಹೊರಗಿನ ಕರಿದ ಪದಾರ್ಥಗಳು ಕಳಪೆ ಎಣ್ಣೆಯಲ್ಲಿ ತಯಾರಾಗಿರುವುದರಿಂದ ಮಕ್ಕಳ ದೇಹದಲ್ಲಿ ಅನಾರೋಗ್ಯಕರ ಕೊಬ್ಬನ್ನು ಹೆಚ್ಚಿಸುತ್ತವೆ.

ಇತರೆ ಆಹಾರಗಳು
ಹೆಚ್ಚು ಸಕ್ಕರೆ ಇರುವ ಸೀರಿಯಲ್ಸ್, ಚಿಪ್ಸ್, ಬಿಸ್ಕಟ್ಸ್, ಕುಕ್ಕೀಸ್, ಫಾಸ್ಟ್ ಫುಡ್, ಕ್ಯಾಂಡೀಸ್ ಹಾಗೂ ಪಾಶ್ಚರೀಕರಿಸದ ಹಾಲು ಕೂಡ ಈ ವಯಸ್ಸಿನ ಮಕ್ಕಳಿಗೆ ಅಪಾಯಕಾರಿ.
ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪೋಷಕರು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಹಣ್ಣು, ತರಕಾರಿ, ಬೇಳೆ, ಸಂಪೂರ್ಣ ಧಾನ್ಯಗಳು ಹಾಗೂ ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ನೀಡುವುದು ಉತ್ತಮ. ಅನಾರೋಗ್ಯಕರ ಆಹಾರ ಪದಾರ್ಥಗಳಿಂದ ಮಕ್ಕಳನ್ನು ದೂರ ಇಡುವುದು ಅವರ ದೀರ್ಘಕಾಲದ ಆರೋಗ್ಯಕ್ಕಾಗಿ ಅತ್ಯಗತ್ಯ.