CHILD CARE| ಮಕ್ಕಳ ಕೂರುವ ಭಂಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಕ್ಕಳ ಕೆಲವು ಅಭ್ಯಾಸಗಳು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಪುಟ್ಟ ವಯಸ್ಸಲ್ಲಿ ಮಕ್ಕಳು ಏನೇ ಮಾಡಿದರೂ ಅದು ಮುದ್ದಾಗಿಯೇ ಇರುತ್ತದೆ. ಆದರೆ ಅದರ ಹಿಂದೆ ಅಡಗಿರುವ ಕೆಲವು ವಿಚಾರಗಳನ್ನು ದೊಡ್ಡವರು ಗಮನಿಸಬೇಕು. ಉದಾ..ಮಕ್ಕಳು ಕುಳಿತುಕೊಳ್ಳುವ ಭಂಗಿ. ಮಕ್ಕಳು ಕುಳಿತುಕೊಳ್ಳುವ ರೀತಿಯಲ್ಲಿ ಸಾಕಷ್ಟು ವಿಧಗಳಿವೆ. ಒಂದೊಂದು ದಿನ ಒಂದೊಂದು ರೀತಿ ಕೂರಬಹುದು ಅನದನು ಪೋಷಕರು ಆಗಾಗ್ಗೆ ಗಮನಿಸಬೇಕು.

ಮಕ್ಕಳು W ಆಕಾರದಲ್ಲಿ ಕುಳಿತುಕೊಳ್ಳುತ್ತಾರೆ. ಇದು ಮಕ್ಕಳಿಗೆ ಮಾತ್ರ ಸಾಧ್ಯ ಆದರೆ, ವಯಸ್ಕರಿಗೆ ಸಾಧ್ಯವಿಲ್ಲ. ಇದೇ ಭಂಗಿ ಅದು ಅವರ ದೇಹದ ಆಕಾರ ಮತ್ತು ಚಲನೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಕುಳಿತುಕೊಳ್ಳುವುದರಿಂದ ಸ್ನಾಯುಗಳು ಬಲಗೊಳ್ಳುವುದಿಲ್ಲ. ಜೊತೆಗೆ ಬೆನ್ನುಮೂಳೆಯ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಈ ಭಂಗಿಯು ಸ್ನಾಯುಗಳು ಸುರುಳಿಯಾಗುವಂತೆ ಮಾಡುತ್ತದೆ.

ಈ ಭಂಗಿಯಲ್ಲಿ ಕುಳಿತುಕೊಳ್ಳುವ ಮಕ್ಕಳು ಮೂಳೆ ರೋಗಗಳು, ಮುಂಭಾಗದ ಕ್ರೂಸಿಯೇಟ್ ಲಿಗಮೆಂಟ್ ಸಮಸ್ಯೆಗಳು ಮತ್ತು ಬೆನ್ನುನೋವಿಗೆ ಹೆಚ್ಚು ಒಳಗಾಗುತ್ತಾರೆ. ಕುಳಿತಾಗ ಸಮತೋಲನ ಕಡಿಮೆಯಾಗುತ್ತದೆ. ಸೆರೆಬ್ರಲ್ ಪಾಲ್ಸಿ ಹೊಂದಿರುವ ಮಕ್ಕಳು, ಮೆದುಳಿನ ಕುಂಠಿತ ಮಕ್ಕಳು, ತೊಡೆಯ ಸ್ನಾಯುಗಳು ಸಮಸ್ಯೆ ಇರುವ ಮಕ್ಕಳೂ ಹೀಗೆಯೇ ಕುಳಿತುಕೊಳ್ಳುತ್ತಾರೆ.

ಮಕ್ಕಳು ಹೀಗೆ ಕುಳಿತರೆ ತಕ್ಷಣ ಮಾಮೂಲಿಯಾಗಿ ಕುಳಿತುಕೊಳ್ಳಲು ಹೇಳಿ. ಅಲ್ಲದೆ, ನಾವು ಹೊರಗೆ ಹೋಗಿ ಆಟವಾಡೋಣ ಅಂತಲೋ ಇನ್ನೇನೋ ಕಾರಣ ಹೇಳಿ ಆ ಭಂಗಿಯಲ್ಲಿ ಕುಳಿತುಕೊಳ್ಲೂವುದನ್ನು ತಪ್ಪಿಸಿ. ಅಗತ್ಯವಿದ್ದರೆ ವೈದ್ಯಕೀಯ ಸಹಾಯವನ್ನು ಪಡೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!