ಹೊಸದಿಗಂತ ಡಿಜಿಟಲ್ ಡೆಸ್ಕ್:
2008ರ ಮುಂಬೈ ದಾಳಿಯ ಸಂಚುಕೋರ, ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರ ಸಾಜಿದ್ ಮಿರ್ನನ್ನು (Sajid Mir) ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ವಿಶ್ವಸಂಸ್ಥೆಯಲ್ಲಿನ ಭಾರತ ಮತ್ತು ಅಮೆರಿಕ ಸಲ್ಲಿಸಿದ್ದ ಪ್ರಸ್ತಾವಕ್ಕೆ ಚೀನಾ (China) ತಡೆಯೊಡ್ಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘1267 ಅಲ್ ಖೈದಾ ಸ್ಯಾಂಕ್ಷನ್ಸ್ ಕಮಿಟಿ’ಯ ಅಡಿಯಲ್ಲಿ ಸಾಜಿದ್ ಮಿರ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದ್ರೆ ಪ್ರಸ್ತಾವಕ್ಕೆ ಚೀನಾ ತಡೆಯೊಡ್ಡಿತ್ತು.
ಸಾಜಿದ್ ಮಿರ್ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ಯಾಗಿದ್ದು,ಅಮೆರಿಕವು ಆತನ ಮೇಲೆ 5 ದಶಲಕ್ಷ ಡಾಲರ್ ಇನಾಮು ಘೋಷಿಸಿದೆ.
ಮಿರ್ ಮೃತಪಟ್ಟಿದ್ದಾನೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಆದರೆ ಪಾಶ್ಚಿಮಾತ್ಯ ದೇಶಗಳು ಪಾಕಿಸ್ತಾನದ ವಾದವನ್ನು ಒಪ್ಪಿರಲಿಲ್ಲ. ಮಿರ್ ಸಾವಿಗೆ ಸಂಬಂಧಿಸಿದ ಸಾಕ್ಷ್ಯಕ್ಕಾಗಿ ಒತ್ತಾಯಿಸಿದ್ದವು. ನಂತರ ಪಾಕಿಸ್ತಾನ ವರಸೆ ಬದಲಿಸಿತ್ತು.