ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಠಿಣ ಲಾಕ್‌ಡೌನ್ ವಿಧಿಸಲಾಗಿದೆ.
ಕಠಿಣ ಲಾಕ್‌ಡೌನ್ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದರೂ, ಲಾಕ್‌ಡೌನ್ ಹೇರಿಕೆಯನ್ನು ಚೀನಾ ಸಮರ್ಥಿಸಿಕೊಂಡಿದೆ. ಅಧ್ಯಕ್ಷ ಷಿ ಜಿನ್‌ಪಿಂಗ್ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗಿಲ್ಲ. ಆದರೂ ನಾಗರಿಕರ ಒತ್ತಡಕ್ಕೆ ಸರ್ಕಾರ ಮಣಿಯದೆ ಲಾಕ್‌ಡೌನ್ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಶೂನ್ಯಕ್ಕಿಳಿಸಲು ಹೇರಿರುವ ಕಠಿಣ ಲಾಕ್‌ಡೌನ್ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಯಾವುದೇ ರೀತಿ ಜನಾಕ್ರೋಶ ವ್ಯಕ್ತವಾಗಿಲ್ಲ. ಸೋಂಕು ನಿರ್ಮೂಲನೆಗೆ ವಸ್ತುಸ್ಥಿತಿ ಆಧರಿಸಿ ದೇಶವು ಪರಿಣಾಮಕಾರಿಯಾದ ನೀತಿ ಅನುಸರಿಸುತ್ತಿದೆ. ನಮಗೆ ಜನರ ಬೆಂಬಲ ಇದೆ ನಮ್ಮ ಹೋರಾಟ ಏನಿದ್ದರೂ ಕೋವಿಡ್ ವಿರುದ್ಧ ಎಂದು ಚೀನಾ ಹೇಳುತ್ತಿದೆ.
ಕಠಿಣ ಲಾಕ್‌ಡೌನ್ ಹೇರಿದ್ದ ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ವಾರ ಬೆಂಕಿ ಕಾಣಿಸಿದ್ದು, 10 ಜನರು ಮೃತಪಟ್ಟಿದ್ದಾರೆ. ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್ ಮುಸ್ಲಿಮರು ಒಟ್ಟಾಗಿ ಚೀನಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದರು