ಭಾರತೀಯ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಿದ ಚೀನಾ: ವೀಸಾ ದರ ಕಡಿತ ಮತ್ತೆ 1 ವರ್ಷ ವಿಸ್ತರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಪ್ರವಾಸಿಗರಿಗೆ ಚೀನಾ ಸಿಹಿ ಸುದ್ದಿ ನೀಡಿದೆ. ಭಾರತೀಯ ನಾಗರಿಕರಿಗೆ ವೀಸಾ ದರಗಳ ಕಡಿತವನ್ನು ಮತ್ತೊಂದು ವರ್ಷ ವಿಸ್ತರಿಸಲಾಗಿದೆ ಎಂದು ಭಾರತದಲ್ಲಿನ ಚೀನಾದ ರಾಯಭಾರ ಕಚೇರಿ ಪ್ರಕಟಿಸಿದೆ.

ಭಾರತದ ಜೊತೆಗಿನ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಚೀನಾ ಈ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ವೀಸಾ ಶುಲ್ಕವನ್ನ ಕಡಿತಗೊಳಿಸುವ ಗಡುವು ಡಿಸೆಂಬರ್ 31, 2025 ರವರೆಗೆ ಮುಂದುವರಿಯುತ್ತದೆ. ಚೀನಾಕ್ಕೆ ಪ್ರಯಾಣಿಸಲು ಬಯಸುವ ವಿದೇಶಿಯರ ಪ್ರಯಾಣದ ಮಾದರಿಗಳನ್ನ ನಿಯಂತ್ರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ವಾಸ್ತವವಾಗಿ, ಕಳೆದ ವರ್ಷ ವೀಸಾ ಬೆಲೆಗಳನ್ನ ಕಡಿಮೆ ಮಾಡಲಾಯಿತು. ಸಿಂಗಲ್ ಎಂಟ್ರಿ ವೀಸಾಗೆ 2,900 ರೂ., ಡಬಲ್ ಎಂಟ್ರಿ ವೀಸಾಗೆ 4,400 ರೂ. ಆರು ತಿಂಗಳವರೆಗೆ ಮಾನ್ಯತೆ ಹೊಂದಿರುವ ಬಹು ಪ್ರವೇಶ ವೀಸಾಗಳು 5,900 ರೂ., ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಮಾನ್ಯತೆ ಹೊಂದಿರುವ ಮಲ್ಟಿ-ಎಂಟ್ರಿ ವೀಸಾಗಳು 8,800 ರೂ. ಕಳೆದ ವರ್ಷದಿಂದ ಇದೇ ಬೆಲೆಗಳು ನಡೆಯುತ್ತಿವೆ. ಚೀನಾ ಈ ಬೆಲೆಗಳನ್ನ ಮತ್ತೊಂದು ವರ್ಷ ವಿಸ್ತರಿಸಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!