January22, 2026
Thursday, January 22, 2026
spot_img

ಭೀಕರ ʼರಗಾಸಾʼ ಸೈಕ್ಲೋನ್‌ಗೆ ತತ್ತರಿಸಿದ ಚೀನಾ: ಈವರೆಗೂ 17 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾದ ತೈವಾನ್‌ನಲ್ಲಿ ಬೀಸುತ್ತಿರುವ ಭೀಕರ ರಗಾಸಾ ಚಂಡಮಾರುತವು ಈವರೆಗೆ ಕನಿಷ್ಠ 17 ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ.

ಚೀನಾಕ್ಕೆ ಅಪ್ಪಳಿಸಿದ ರಗಾಸಾ ಚಂಡಮಾರುತವು ಭಾರೀ ವಿನಾಶವನ್ನುಂಟು ಮಾಡಿದ್ದು, ಹಾಂಗ್ ಕಾಂಗ್ ವಾಯು ವಿಹಾರದ ಮೇಲೆ ದೀಪಸ್ತಂಭಗಳಿಗಿಂತ ಎತ್ತರದ ಅಲೆಗಳು ಬೀಸಿದ ಪರಿಣಾಮ ತೈವಾನ್ ಮತ್ತು ಫಿಲಿಪೈನ್ಸ್‌ನಲ್ಲಿ ಮಾರಕ ಹಾನಿಯುಂಟಾಗಿದೆ.

ದಕ್ಷಿಣ ಚೀನಾದ ಕರಾವಳಿಯಲ್ಲಿ ಸಮುದ್ರ ಕೂಡ ಪ್ರಕ್ಷುಬ್ಧಗೊಂಡಿದ್ದು, ತೈವಾನ್‌ನಲ್ಲಿ, ಪ್ರವಾಹದ ತೀವ್ರತೆಗೆ ರಸ್ತೆಗಳು ಕೊಚ್ಚಿ ಹೋಗಿದ್ದು, ನೂರಾರು ವಾಹನಗಳು ಕೂಡ ನೀರುಪಾಲಾಗಿದೆ. ವರದಿ ಪ್ರಕಾರ ಈವರೆಗೆ 17 ಜನರು ಸಾವನ್ನಪ್ಪಿದ್ದಾರೆ.

ದಕ್ಷಿಣ ಚೀನಾದ ಆರ್ಥಿಕ ಶಕ್ತಿ ಕೇಂದ್ರವಾದ ಗುವಾಂಗ್‌ಡಾಂಗ್ ಪ್ರಾಂತ್ಯದಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ತಿಳಿಸಿದೆ. ಚುವಾಂಡಾವೊ ಪಟ್ಟಣದ ಹವಾಮಾನ ಕೇಂದ್ರವು ಮಧ್ಯಾಹ್ನ ಗರಿಷ್ಠ 241 ಕಿ.ಮೀ (ಸುಮಾರು 150 ಮೈಲುಗಳಷ್ಟು) ವೇಗದ ಗಾಳಿ ಬೀಸಿದೆ ಎಂದು ದಾಖಲಿಸಿದೆ, ಇದು ಜಿಯಾಂಗ್‌ಮೆನ್ ನಗರದಲ್ಲಿ ಬೀಸಿದ ದಾಖಲೆಯ ಬಿರುಗಾಳಿ ಎಂದು ತಿಳಿದು ಬಂದಿದೆ.

Must Read