February 18, 2026
Wednesday, February 18, 2026
spot_img

AI ಸಮಿಟ್ ಎಕ್ಸ್‌ಪೋದಲ್ಲಿ ಚೀನಾದ ರೋಬೋಟ್ ಡಾಗ್? ಗಾಲ್ಗೋಟಿಯಾಸ್ ವಿವಿ ಸ್ಟಾಲ್ ತೆರವು!

ಹೊಸದಿಗಂತ ಡಿಜಿಟಲ್ ಡೆಸ್ಕ್:


ದೆಹಲಿಯಲ್ಲಿ ನಡೆದ AI ಸಮಿಟ್ ಎಕ್ಸ್‌ಪೋದಲ್ಲಿ ಚೀನಾದ ರೋಬೋಟ್ ನಾಯಿಯನ್ನು ತಮ್ಮದೇ ಸಂಶೋಧನಾ ಉತ್ಪನ್ನವೆಂದು ಪ್ರದರ್ಶಿಸಿದ್ದಾರೆ ಎಂಬ ಆರೋಪಕ್ಕೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಗುರಿಯಾಗಿದ್ದು, ತನ್ನ ಸ್ಟಾಲ್ ನ್ನು ತಕ್ಷಣ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯೊಬ್ಬರು, ರೋಬೋಟ್ ನಾಯಿಗೆ “ಓರಿಯನ್” ಎಂದು ಹೆಸರು ಇಡಲಾಗಿದ್ದು, ಅದನ್ನು ಗಾಲ್ಗೋಟಿಯಾಸ್ನ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ ಎಡನು ಹೇಳಿದ್ದರು, ಆದರೆ ರೋಬೋಟ್ ಡಾಗ್ ವಿಶ್ವವಿದ್ಯಾಲಯದ ಸ್ವಂತ ಆವಿಷ್ಕಾರವಲ್ಲ, ಚೀನಾದ Unitree ಕಂಪನಿಯ Go2 ಮಾದರಿಯಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ವಿವಾದ ತೀವ್ರಗೊಂಡ ಬಳಿಕ, ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದು, ಪ್ರದರ್ಶಿಸಲಾದ ರೋಬೋಟ್ ಡಾಗ್ ನ್ನು ಸಂಸ್ಥೆ ಅಭಿವೃದ್ಧಿಪಡಿಸಿದ್ದಾಗಿ ಯಾವುದೇ ಹೇಳಿಕೆ ನೀಡಿಲ್ಲ.ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶದಿಂದ ಚೀನಾ, ಸಿಂಗಾಪುರ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಿಂದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕ್ಯಾಂಪಸ್‌ಗೆ ತರಲಾಗುತ್ತಿದೆವಿಶ್ವವಿದ್ಯಾಲಯ ತನ್ನ ಉದ್ದೇಶವು ಜಾಗತಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ವಿದ್ಯಾರ್ಥಿಗಳನ್ನು ಪರಿಚಯಿಸುವುದೇ ಆಗಿದ್ದು,ಭವಿಷ್ಯದಲ್ಲಿ ಭಾರತೀಯ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತೆ ಪ್ರೇರೇಪಿಸುವುದೇ ಉದ್ದೇಶ ಎಂದು ಸ್ಪಷ್ಟಪಡಿಸಿದೆ.

https://twitter.com/GalgotiasGU/status/2023852646927643040?ref_src=twsrc%5Etfw%7Ctwcamp%5Etweetembed%7Ctwterm%5E2023852646927643040%7Ctwgr%5E18d36f61d50bdac799425545011b61c3128863d6%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2026%2FFeb%2F18%2Fgalgotias-university-asked-to-vacate-ai-summit-expo-after-chinese-robodog-row

ವೈರಲ್ ಆದ ವಿಡಿಯೋ
ಎಐ ಶೃಂಗಸಭೆಯಲ್ಲಿಮಾಧ್ಯಮ ಸಂವಾದದ ಸಮಯ ವಿಶ್ವವಿದ್ಯಾಲಯದ ಪ್ರತಿನಿಧಿಯೊಬ್ಬರು “ಒರಿಯನ್” ನ್ನು ಸಂಸ್ಥೆಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಯಿತು.ಈ ರೋಬೋಟ್ ನಿಗಾವಹಣೆ ಮತ್ತು ಮೇಲ್ವಿಚಾರಣೆ ಕಾರ್ಯಗಳಿಗೆ ಬಳಸಬಹುದು ಎಂದು ವಿವರಿಸಲಾಗಿತ್ತು. ಬಳಿಕ ಇದು ಸುಮಾರು 2–3 ಲಕ್ಷ ರೂಪಾಯಿ ಬೆಲೆಯ Unitree Go2 ಮಾದರಿಯೊಂದಿಗೆ ಹೋಲಿಕೆಯಾಗುತ್ತದೆ ಎಂದು ಹೇಳಿದ್ದರು.

https://twitter.com/Eng_china5/status/2023750941049045335?ref_src=twsrc%5Etfw%7Ctwcamp%5Etweetembed%7Ctwterm%5E2023889995346702611%7Ctwgr%5E18d36f61d50bdac799425545011b61c3128863d6%7Ctwcon%5Es3_&ref_url=https%3A%2F%2Fwww.kannadaprabha.com%2Fnation%2F2026%2FFeb%2F18%2Fgalgotias-university-asked-to-vacate-ai-summit-expo-after-chinese-robodog-row

ಇದರ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ X ನಲ್ಲಿ ಪ್ರತಿಕ್ರಿಯಿಸಿ, AI ಸಮಿಟ್ ನ್ನು “ಅವ್ಯವಸ್ಥಿತ ಪಿಆರ್ ಪ್ರದರ್ಶನ” ಎಂದು ಟೀಕಿಸಿದ್ದಾರೆ. ಚೀನಾದ ಉತ್ಪನ್ನಗಳನ್ನು ಪ್ರದರ್ಶಿಸಿರುವುದರಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹಾಸ್ಯಕ್ಕೆ ಗುರಿಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !