March 16, 2026
Monday, March 16, 2026
spot_img

ರಣಜಿ ಟ್ರೋಫಿಯಲ್ಲಿ ಇತಿಹಾಸ ಬರೆದ ಜಮ್ಮು-ಕಾಶ್ಮೀರ: ಮೊದಲ ಬಾರಿಗೆ ಫೈನಲ್‌ಗೆ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟ್ರೋಫಿ ಫೈನಲ್ ಗೆ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ಎಂಟ್ರಿಕೊಟ್ಟಿದೆ.

ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ ವಿರುದ್ಧದ ಮ್ಯಾಚ್ ನಲ್ಲಿ ಗೆದ್ದ ಜಮ್ಮು ಮತ್ತು ಕಾಶ್ಮೀರ ಫೈನಲ್ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಬಂಗಾಳ ನೀಡಿದ 126 ರನ್‌ಗಳ ಗುರಿಯನ್ನು ಜಮ್ಮು–ಕಾಶ್ಮೀರ 34.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸಾಧಿಸಿತು. ವನ್ಸಾಜ್ ಶರ್ಮಾ (ಔಟ್ ಆಗದೆ 43) ಮತ್ತು ಅಬ್ದುಲ್ ಸಮದ್ (ಔಟ್ ಆಗದೆ 30) ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಆಲ್‌ರೌಂಡ್ ಪ್ರದರ್ಶನ ನೀಡಿದ ಔಕಿಬ್ ನಬಿ , ಒಂಬತ್ತು ವಿಕೆಟ್‌ಗಳು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಗೆಲುವಿಗೆ ಮಹತ್ತರ ಕೊಡುಗೆ ನೀಡಿದರು.

ಸಿಎಂ ಒಮರ್ ಅಬ್ದುಲ್ಲಾ ಅಭಿನಂದನೆ
ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು, ಆಟಗಾರರು, ಕೋಚ್‌ಗಳು ಮತ್ತು ಸಿಬ್ಬಂದಿಯ ಶ್ರಮವನ್ನು ಪ್ರಶಂಸಿಸಿದ್ದಾರೆ.ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದು, ಭವಿಷ್ಯದಲ್ಲಿ ಜಮ್ಮು–ಕಾಶ್ಮೀರ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವುದನ್ನು ನೋಡುವ ದಿನ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !