VIRAL VIDEO| ಬಾಣಲೆ ಜೊತೆ ಬಾಲಕನ ಸ್ಟಂಟ್ಸ್‌ ಮಾಮೂಲಿಯಾಗಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಡುಗೆ ಮಾಡುವವರು ಜಾಗ್ರತೆಯಾಗಿರಬೇಕು. ಸ್ವಲ್ಪ ಅಜಾಗ್ರತೆ ವಹಿಸಿದರೂ ಏನಾದರು ಯಡವಟ್ಟಾಗುವ ಸಾಧ್ಯತೆಗಳೇ ಹೆಚ್ಚು. ಹೀಗಿರುವಾಗ ವೈರಲ್‌ ಆಗಿರುವ ವಿಡಿಯೋದಲ್ಲಿ ಬಾಲಕನ ಸ್ಟಂಟ್ಸ್‌ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ.

ಚೀನಾದ ಪುಟ್ಟ ಹುಡುಗನೊಬ್ಬ ಬಾಣಸಿಗನಂತೆ ಕೈಯಲ್ಲಿ ಸೌಟು ಬಾಣಲೆಯನ್ನು ವಿಷ್ಣುವಿನ ಚಕ್ರದಂತೆ ತಿರುಗಿಸುತ್ತಾನೆ. ಈ ವಿಡಿಯೋ ನೋಡಿದವರು ವಾವ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟು ಚಿಕ್ಕ ಮಗು ಇಷ್ಟು ದೊಡ್ಡ ಬಾಣಲೆ ಎತ್ತಿ ಹೀಗೆ ಮಾಡುವುದೆಂದರೆ ತಮಾಷೆ ಮಾತೇ ಅಲ್ಲ ಎಂಬ ಕಮೆಂಟ್‌ಗಳೂ ಬರುತ್ತಿವೆ.

ಈ ಮಗುವಿನ ಪ್ರತಿಭೆಯ ಬಗ್ಗೆ ಮಾತನಾಡಿದ ತಾಯಿ, ಟಿವಿಯಲ್ಲಿ ಅಡುಗೆ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ನೋಡಿ ನೋಡಿ ಈ ರೀತಿ ಕಲಿತಿದ್ದಾನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!