ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿ ಗೆ ವರ್ಗಾಯಿಸಿದೆ. ಸಿಐಡಿ ವಿಶೇಷ ತನಿಖಾ ವಿಭಾಗದ ಎಸ್ ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ.
ಸಿಐಡಿ ತಂಡವು ಸ್ಟೇಡಿಯಂನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಪೂರ್ಣವಾಗಿ ಸಂಗ್ರಹಿಸಿ, ನೂಕು ನುಗ್ಗಲು ಹಾಗೂ ಕಾಲ್ತುಳಿತ ಉಂಟಾದ ಗೇಟ್‌ಗಳ ನಿಖರ ಪರಿಶೀಲನೆ ನಡೆಸುತ್ತಿದೆ. ಅನುಮತಿ ಪತ್ರಗಳು ಹಾಗೂ ಸಂಬಂಧಿತ ದಾಖಲೆಗಳ ಪರಿಶೀಲನೆ ಕೂಡ ನಡೆಯುತ್ತಿದೆ.
ಸಿಸಿಟಿವಿ ಪರಿಶೀಲನೆ ನಂತರ, ಸಿಐಡಿ ತಂಡವು ಕೆಎಸ್ ಸಿಎ ಆಡಳಿತ ಮಂಡಳಿಗೆ ನೋಟಿಸ್ ಕಳುಹಿಸಿ ಸಂಬಂಧಿತವರನ್ನು ವಿಚಾರಣೆ ನಡೆಸಲಿದ್ದು, ಸೋಮವಾರ ಬಂಧಿತ ನಾಲ್ವರ ಮೇಲೆ ಬಾಡಿ ವಾರೆಂಟ್ ಪಡೆದು ಕಸ್ಟಡಿಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಈ ನಾಲ್ವರು ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದಾಗಿ ತಿಳಿದು ಬಂದಿದೆ.