ಚಿರಾಗ್ ನನ್ನ ಮಗನಿದ್ದಂತೆ: ಯುವ ನಾಯಕನಿಗೆ ಪ್ರಧಾನಿ ಮೋದಿ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರದ ಹಾಜಿಪುರದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಲೋಕ ಜನತಾ ಪಕ್ಷದ (LJP) ನಾಯಕ ಚಿರಾಗ್ ಪಾಸ್ವಾನ್ (Chirag Paswan) ಅವರನ್ನು ಹಾಡಿ ಹೊಗಳಿದ್ದಾರೆ.

ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಪಾಸ್ವಾನ್ ಹಾಜಿಪುರದಿಂದ ಸ್ಪರ್ಧಿಸುತ್ತಿರುವುದನ್ನು ನೆನಪಿಸಿಕೊಂಡ ಪಿಎಂ ಮೋದಿ, ಈ ಯುವ ನಾಯಕನಿಗೆ ಮತ ಚಲಾಯಿಸಿ ಮತ್ತು ಅವರ ತಂದೆಯ ದಾಖಲೆಯ ಗೆಲುವನ್ನು ಕೂಡ ಮುರಿಯುವಂತೆ ಆಶೀರ್ವದಿಸಿ ಎಂದಿದ್ದಾರೆ.

ಸಂಸದರಾಗಿ ಹೊಸ ವಿಷಯಗಳನ್ನು ಕಲಿಯಲು ಚಿರಾಗ್ ಪಾಸ್ವಾನ್ ಅವರ ಸಮರ್ಪಣೆಯನ್ನು ಶ್ಲಾಘಿಸಿದ ಪಿಎಂ ನರೇಂದ್ರ ಮೋದಿ, ಚಿರಾಗ್ ಪಾಸ್ವಾನ್ ಯಾವುದೇ ವಿರಾಮವಿಲ್ಲದೆ ಸಂಸತ್ತಿನ ಎಲ್ಲಾ ಅಧಿವೇಶನಗಳಿಗೆ ಹಾಜರಾಗುತ್ತಿದ್ದರು.ಚಿರಾಗ್ ಬಿಹಾರದ ನಿಜವಾದ ಪ್ರತಿನಿಧಿ, ಬಿಹಾರದ ಭವಿಷ್ಯ. ಆದ್ದರಿಂದ, ನೀವು ಚಿರಾಗ್‌ಗೆ ಮತ ಹಾಕಿದಾಗ ಅದು ನೇರವಾಗಿ ಮೋದಿ ಖಾತೆಗೆ ಹೋಗುತ್ತದೆ. ಚಿರಾಗ್ ನನ್ನ ಮಗನಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!