ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸ್ಯಾಂಡಲ್‌ವುಡ್ ನಟ ದಿ. ಚಿರಂಜೀವಿ ಸರ್ಜಾ ಅವರ ಜನ್ಮದಿನ. ಅವರ ಪತ್ನಿ ಮೇಘನಾ ರಾಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕರಾಗಿ ಫೋಟೋ ಹಂಚಿಕೊಂಡಿದ್ದಾರೆ.
ಮೇಘನಾ ರಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿರಂಜೀವಿ ಸರ್ಜಾ ಜತೆಗಿನ ಫೋಟೊ ಹಂಚಿಕೊಂಡಿದ್ದು, ʼʼಹ್ಯಾಪಿ ಬರ್ತ್ ಡೇ ಹಸ್ಬೆಂಡ್ʼʼ ಎಂದು ಬರೆದುಕೊಂಡಿದ್ದಾರೆ.
ಅದಾಗ್ಯೂ ಧ್ರುವ ಸರ್ಜಾ ಕೂಡ ಅಣ್ಣನೊಂದಿಗಿನ ಫೋಟೊ ಹಂಚಿಕೊಂಡಿದ್ದು, ʼʼತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ಹೇಳಿದ್ದಾರೆ.
2020ರ ಜೂನ್ 7 ರಂದು ವಿಧಿವಶರಾದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅವರ ಅಭಿಮಾನಿಗಳು ಎಲ್ಲೆಡೆ ಸಂಭ್ರಮಿಸುತ್ತಿದ್ದಾರೆ.