ಹೊಸದಿಗಂತ ವರದಿ,ಸೋಮವಾರಪೇಟೆ:
ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರು ಹಾಗೂ ಬೃಹನ್ಮಠದ ಆಡಳಿತಾಧಿಕಾರಿ ರೇಖಾ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ.
ವಿವಾದದಲ್ಲಿರುವ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಕಳೆದ ಆಗಸ್ಟ್ ನಲ್ಲಿ ಅಧಿಕಾರ ವಹಿಸಿಕೊಂಡು ಮಠದ ಆಡಳಿತ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ತರುವ ಮೂಲಕ ಗಮನ ಸಳೆಯುವುದರೊಂದಿಗೆ ಮಠದ ನೌಕರರು ಹಾಗೂ ಭಕ್ತರ ಪ್ರಶಂಸೆಗೆ ಪಾತ್ರರಾಗಿದ್ಧ ರೇಖಾ ಅವರ ವರ್ಗಾವಣೆ ಆತಂಕ ಮತ್ತು ಬೇಸರ ಮೂಡಿಸಿದೆ.
ಕೊಡಗಿನಲ್ಲೂ ಬೃಹನ್ಮಠ ಸಾಕಷ್ಟು ಆಸ್ತಿ ಹೊಂದಿದ್ದು ಕಳೆದ ಕೆಲದಿನಗಳ ಹಿಂದೆಯಷ್ಟೇ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಅಕ್ರಮವಾಗಿ ಮಠದ ಆಸ್ತಿ ಕಬಳಿಸಿರುವವರು ತಾವಾಗಿಯೇ ಬಿಟ್ಟುಕೊಡಿ ಇಲ್ಲವಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಹಲವರ ನಿದ್ದೆಗೆಡಿಸಿದ್ದರು.
ಜಿಲ್ಲೆಯ ಮಠಗಳ ಅಭಿವೃದ್ದಿ ಹಾಗೂ ಎಲ್ಲಾ ಮಠಗಳಿಗೆ ಸ್ವಾಮೀಜಿಗಳನ್ನು ನೇಮಿಸುವ ದಿಟ್ಟ ನಿರ್ಧಾರ ತೆಗೆದುಕೊಂಡು ಮುಂದಡಿ ಇಟ್ಟಿದ್ದ ಆಡಳಿತಾಧಿಕಾರಿಗಳ ವರ್ಗಾವಣೆ ಮಠದ ನೈಜ ಭಕ್ತರಲ್ಲಿ ನಿರಾಸೆ ಮೂಡಿಸಿದೆ.