ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ಕಾಮುಕನೊಬ್ಬ ಬಾಲಕಿಗೆ ಚಾಕ್ಲೆಟ್ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಸಿಂಧನೂರಿನ ವಲಸೆ ಕಾರ್ಮಿಕ ಸಪನ್ ಮೊಂಡಲ್ನನ್ನು ಪೊಲೀಸರು ಬಂಧಿಸಿದ್ದಾರೆ. 11 ವರ್ಷದ ಬಾಕಿಯ ಮನೆಯ ಬಳಿ ಈತ ವಾಸಿಸುತ್ತಿದ್ದ, ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಚಾಕ್ಲೆಟ್ ಕೊಡಿಸುತ್ತೇನೆ ಬಾ ಎಂದು ಬೈಕ್ನಲ್ಲಿ ಹತ್ತಿಸಿಕೊಂಡಿದ್ದಾನೆ.
ನೆರೆಮನೆಯಾತ ಆದ್ದರಿಂದ ಮುಖಪರಿಚಯವಿರುವ ಕಾರಣ ಬಾಲಕಿ ಬೈಕ್ ಹತ್ತಿದ್ದಾಳೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿ ಬಿಟ್ಟುಬಂದಿದ್ದಾರೆ. ಬಾಲಕಿ ಹೇಗೋ ಮನೆ ಸೇರಿದ್ದು, ಅಪ್ಪ ಅಮ್ಮನಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.