ಚೋಕರ್ಸ್ ಹಣೆಪಟ್ಟಿ ಕಳಚದ ದ. ಆಫ್ರಿಕಾ: ಚಾಂಪಿಯನ್ಸ್ ಫೈನಲ್ ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿ ಫೈನಲ್ ನಲ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ನಲ್ಲೂ ಪರಾಕ್ರಮ ಮೆರೆದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದೆ.

ಪಾಕ್ ನ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಆರು ವಿಕೆಟ್‌ಗಳಿಗೆ 362 ರನ್ ಗಳಿಸಿತು.

ಇದನ್ನು ಬೆನ್ನತ್ತಿದ್ದ ಆಫ್ರಿಕಾ 9 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಸೋಲು ಅನುಭವಿಸಿದೆ. ಈ ಮೂಲಕ ನ್ಯೂಜಿಲೆಂಡ್ 50 ರನ್ ಗಳ ಗೆಲುವು ಕಂಡಿದೆ.

ಮಾರ್ಚ್ 9 ರಂದು ಫೈನಲ್ ನಲ್ಲಿ ಭಾರತ- ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ .

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!