ಹೊಸದಿಗಂತ ವರದಿ ಹಾಸನ:
ಚನ್ನರಾಯಪಟ್ಟಣ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಮತ್ತು ತಾಲ್ಲೂಕು ವಿಶ್ವ ಕರ್ಮ ಸಮಾಜದ ವತಿಯಿಂದ ಡಿ.12ರಂದು ಪಟ್ಟಣದ ಕಾಳಿಕಾಂಬ ದೇವಾಲಯದ ಆವರಣದಲ್ಲಿ ಕವನ ವಾಚನ, ಭಕ್ತಿ ಗೀತೆಗಳ ಗಾಯನ, ಹಾಗೂ ಚುಟುಕು ಸಾಹಿತ್ಯದ ಚಿಂತನ ಮಂಥನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಚಸಾಪ ಅಧ್ಯಕ್ಷ ಬಾ ನಂ ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಕರ್ಮ ಸಮಾಜದ ಅಧ್ಯಕ್ಷ ಮಂಜುರಾಜಾಚಾರ್ ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಕರಾಚಾರ್ ನೆರವೇರಿಸುವರು. ಗೋಕಾಕ್ ಪುಟ್ಟಣ್ಣ, ಸೋಮೇಷಾರಾಧ್ಯ, ವಸುಮತಿ ಜೈನ್, ಎಂ ಕೆ ಜಯಂತಿಚಂದ್ರಶೇಖರ,ಪ್ರೇಮ ಪ್ರಶಾಂತ್, ಹೇಮಲತಾ, ಜಯಪ್ರಕಾಶ್ ಇನ್ನಿತರರು ಉಪಸ್ಥಿತರಿರಲಿದ್ದಾರೆ.
ಚುಟುಕು ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು 9008131272. 9740133827 ಈ ಸಂಖ್ಯೆಗೆ ವಾಟ್ಸಾಪ್ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.