ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಆಮೀರ್ ಖಾನ್ ಸದ್ಯ ‘ಸಿತಾರೆ ಜಮೀನ್ ಪರ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಸಿನಿಮಾ ಬಗ್ಗೆ ಅಪ್ಡೇಟ್ವೊಂದು ಸಿಕ್ಕಿದೆ.
11 ವರ್ಷಗಳ ಬಳಿಕ ಪಿಕೆ, ಸಂಜು ಸಿನಿಮಾಗಳ ನಿರ್ದೇಶಕ ರಾಜ್ಕುಮಾರ್ ಹಿರಾನಿ ಜೊತೆ ನಟ ಕೈಜೋಡಿಸಿದ್ದಾರೆ.
‘ಪಿಕೆ’ ಚಿತ್ರದ ಮೂಲಕ ಸೂಪರ್ ಹಿಟ್ ಕೊಟ್ಟಿದ್ದ ಆಮೀರ್ ಖಾನ್ ಮತ್ತು ರಾಜ್ಕುಮಾರ್ ಹಿರಾನಿ ಮತ್ತೆ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ. ಭಾರತೀಯ ಸಿನಿಮಾರಂಗ ಪಿತಾಮಹ ಎಂದು ಕರೆಯಲಾಗುವ ‘ದಾದಾ ಸಾಹೇಬ್ ಪಾಲ್ಕೆ’ ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ತರಲು ನಿರ್ಧರಿಸಲಾಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಕಾಂಬಿನೇಷನ್ನಲ್ಲಿ ಪಿಕೆಯಂತ ಹಿಟ್ ಸಿನಿಮಾ ಸಿಕ್ಕಿದ್ದು, ಜನರ ಎಕ್ಸ್ಪೆಕ್ಟೇಷನ್ ಸಾಮಾನ್ಯವಾಗೇ ಹೆಚ್ಚಾಗಿದೆ.