ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ ನಡೆಯುತ್ತಿದ್ದ ಡೆವಿಲ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದ ನಟ ದರ್ಶನ್ 10 ದಿನಗಳ ಬಳಿಕ ಇಂದು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ದರ್ಶನ್‌ಗೆ ಸಾಥ್ ನೀಡಿದ್ದರು. ಚಿತ್ರೀಕರಣ ಮುಗಿಸಿ ಇಂದು ನಟ ದರ್ಶನ್ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ವಾಪಸ್ಸಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಫೋಟೋಸ್ ಇದೀಗ ವೈರಲ್ ಆಗಿದೆ.
ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಡೆವಿಲ್ ಚಿತ್ರ ಹೊರಬರುತ್ತಿದ್ದು, ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಸೇರಿದಂತೆ ಇನ್ನಿತರರು ನಟಿಸುತ್ತಿದ್ದಾರೆ.